ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮಿ -ಶ್ರೀ ದುರ್ಗಾ ಪೂಜೆ

0

ಪಂಜ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜೆ ಮತ್ತು ಶ್ರೀ ದುರ್ಗಾ ಪೂಜೆ ಆ.16 ರಂದು ನಡೆಯಿತು.

ಭಜನಾ ಮಂಡಳಿ ಅಧ್ಯಕ್ಷ ಮೇದಪ್ಪ ಗೌಡ ಪಂಜದಬೈಲು, ನಿಕಟಪೂರ್ವಾದ್ಯಕ್ಫ ಬಾಲಕೃಷ್ಣ ಪುತ್ಯ, ಕಾರ್ಯದರ್ಶಿ ಗುರು ಪ್ರಸಾದ್ ತೋಟ, ಕೋಶಾಧಿಕಾರಿ ಲೋಕೇಶ್ ಬರೆಮೇಲು, ಭಜನಾ ಮಂಡಳಿ ಸದಸ್ಯರು, ಶಾರದೋತ್ಸವ ಸಮಿತಿ ಪದಾಧಿಕಾರಿಗಳು,ಪೂರ್ವಾಧ್ಯಕ್ಷ ಕುಸುಮಾಧರ ಕೆಮ್ಮೂರು ಭಕ್ತಾದಿಗಳು ಉಪಸ್ಥಿತರಿದ್ದರು.

ಆ ಪ್ರಯುಕ್ತ ಭಜನಾ ಸಂಕೀರ್ತನೆ, ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.ವೈಧಿಕ ಕಾರ್ಯಕ್ರಮಗಳನ್ನು ಮುರಳಿಕೃಷ್ಣ ಭಟ್ ವಳಲಂಬೆ , ಕೃಷ್ಣ ಭಟ್ ರವರು ನೆರವೆರಿಸಿದರು.