ಗುತ್ತಿಗಾರಿನಲ್ಲಿ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ 8 ನೇ ಶಾಖೆ ಉದ್ಘಾಟನೆ

0

ಜನಾರ್ದನ ಪೂಜಾರಿ ಹಾಗೂ ನರೇಂದ್ರ ಮೋದಿಯವರಿಂದ ಸಾಮಾನ್ಯ ಜನರು ಬ್ಯಾಂಕ್ ಗೆ ಹೋಗುವಂತಾಯಿತು ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಅವರು ಭಾರತ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ನೋಂದಾಯಿಸಲಾಗಿರುವ ದಕ್ಷಿಣ-ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿಮಿಟೆಡ್ ನ 8ನೇ ಶಾಖೆಯು ಗುತ್ತಿಗಾರಿನ ದೇವಿ ಸಿಟಿ ಕಾಂಪ್ಲೆಕ್ಸ್ ನಲ್ಲಿ ಆ.17 ರ ಸಂಜೆ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಸಂಸ್ಥೆಯೂ ಬೆಳೆದು ಬರಲಿ, ಭಾರತವೇ ಸದೃಡವಾಗಿ ಬೆಳೆಯುತ್ತಿದೆ. ಆರ್ಥಿಕತೆ ಬಲಿಷ್ಠವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಾಮಾನ್ಯ ಜನರೂ ಜನಧನ್ ಖಾತೆ ಮೂಲಕ ಬ್ಯಾಂಕ್ ಹೋಗುವಂತೆ ಮಾಡಿದ ನರೇಂದ್ರ ಮೋದಿ ಹಾಗೂ ಈ ಹಿಂದೆ ಸಾಮನ್ಯ ಜನರೂ ಬ್ಯಾಂಕ್ ಗೆ ಬರುವಂತೆ ಯೋಜನೆ ರೂಪಿಸಿದ ಜನಾರ್ದನ ಪೂಜಾರಿ ಅವರ ಕಾರ್ಯ ಶ್ಲಾಘನೀಯ ಎಂದರು.

ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ನೂತನ ಕಛೇರಿ ಉದ್ಘಾಟಿಸಿದರು.

ಮಾಜಿ ಸಚಿವ ಎಸ್. ಅಂಗಾರ ನೂತನ ಕಛೇರಿಯಲ್ಲಿ ದೀಪ ಬೆಳಗಿಸಿ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಸಭಾ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಮ್ಯೂಚುಯಲ್ ಬೆನಿಫಿಟ್ ನಿಧಿ ಲಿ. ನ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಜೋಯಲ್ ನೊರೊನ್ಹಾ ಸಭಾ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ರಾಷ್ಟ್ರೀಯ ರಬ್ಬರ್ ಮಂಡಳಿ ಸದಸ್ಯ ಮುಳಿಯ ಕೇಶವ ಭಟ್,ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಗುತ್ತಿಗಾರು ಸೊಸೈಟಿ ಅಧ್ಯಕ್ಷ ವೆಂಕಟ್ ದಂಬೆಕೋಡಿ,ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸುಮಿತ್ರ ಮೂಕಮಲೆ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕೂಜುಗೋಡು, ಗುತ್ತಿಗಾರು ಸಂತ ಮರಿಯಮ್ಮನವರ ದೇವಾಲಯದ ಧರ್ಮಗುರು ರೆl ಫಾ। ಆದರ್ಶ್ ಜೋಸೆಫ್, ಶ್ರೀ ದೇವಿ ಸಿಟಿ ಕಾಂಪ್ಲೆಕ್ಸ್ ಮಾಲಕ ದೇವಿಪ್ರಸಾದ್ ಚಿಕ್ಮುಳಿ ಮಾತನಾಡಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಸನತ್ ಮುಳುಗಾಡು, ಉದ್ಯಮಿ ಕೃಷ್ಣ ಕಾಮತ್, ಎ.ಪಿ.ಎಂ.ಸಿ ಮಾಜಿ ಉಪಾಧ್ಯಕ್ಷ ಸಂತೋಷ್ ಜಾಕೆ, ಗುತ್ತಿಗಾರು ಶಾಖಾ ವ್ಯವಸ್ಥಾಪಕಿ ನಿಖಿತಾ, ಆದಂ, ಗುತ್ತಿಗಾರು ಶಾಖಾ ಸಲಹಾ ಸಮಿತಿ ಅಧ್ಯಕ್ಷ ಸೀತಾರಾಮ ಪೊಸವಳಿಕೆ, ಕಡಬ ಶಾಖಾ ಅಧ್ಯಕ್ಷ ಎಸ್. ಸತೀಶ್ ನಾಯಕ್, ಗುತ್ತಿಗಾರು ಶಾಖಾ ಉಪಾಧ್ಯಕ್ಷ ಕೃಷ್ಣಪ್ಪ ಮಡಿವಾಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಿವೃತ್ತ ಬ್ಲಾಕ್ ಕ್ಯಾಟ್ ಕಮಾಂಡೋ ಬಹ್ರೈನ್ ಹಾಗೂ ರಾಜ್ಯ ವಾಲಿಬಾಲ್ ಆಟಗಾರ ಚಾಕೋ ಫಿಲಿಫ್, ಭಾರತೀಯ ಸೇನೆಯೊಂದಿಗೆ 2000 ಕಿ.ಮಿ ಬೈಕ್ ರ್ಯಾಲಿಯಲ್ಲಿ ಭಾಗಿಯಾದ ಸಾಹಸಿ ಕುಮಾರಿ ವೃಷ್ಠಿ ಮಲ್ಕಜೆ, ಯೇನೆಕಲ್ಲಿನ ಖ್ಯಾತ ನಾಟಿ ವಿಷ ವೈದ್ಯ ನಾಗೇಶ್ ನೆಕ್ರಾಜೆ, ಖ್ಯಾತ ಯುವ ಯಕ್ಷ ಭಾಗವತೆ ಕು. ರಚನಾ ಚಿದ್ಗಲ್, ಭಾರತೀಯ ಭೂಸೇನೆಯ ನಿವೃತ್ತ ಸೈನಿಕರಾದ ಮಹೇಶ್ ಕೊಪ್ಪತಡ್ಕ, ಭಾರತೀಯ ಅರೆ ಸೇನಾಪಡೆಯ ನಿವೃತ್ತ ಸೈನಿಕೆ ಶ್ರೀಮತಿ ಅನಿತಾ ಮಹೇಶ್ ಕೊಪ್ಪತಡ್ಕ, ಪ್ರಶಸ್ತಿ ವಿಜೇತ ಗುತ್ತಿಗಾರು ಚರ್ಚ್ ನ ರೆl ಫಾl ಆದರ್ಶ ಜೊಸೆಫ್ ಹಾಗೂ ದೇವಿ ಸಿಟಿ ಕಾಂಪ್ಲೆಕ್ಸ್ ನ ಮಾಲಕ ದೇವಿಪ್ರಸಾದ್ ಚಿಕ್ಮುಳಿಯವರನ್ನು ಸನ್ಮಾನಿಸಲಾಯಿತು.

ಗುತ್ತಿಗಾರು ಶಾಖೆಯ ಅಧ್ಯಕ್ಷ ಸೀತಾರಾಮ ಹೊಸೊಳಿಕೆ ಸ್ವಾಗತಿಸಿದರು.


ಮಂಗಳೂರು ಶಾಖೆಯ ಪ್ರಣಿತಾ ಸುವರ್ಣ ಮ್ಯೂಚುಯಲ್‌ ಫಂಡ್‌ ಸಂಸ್ಥೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರದೀಪ್ ಅವರು ಸನ್ಮಾನಿತ ಪರಿಚಯ ವಾಚಿಸಿದರು. ಸತೀಶ್ ನಾಯಕ್ ವಂದಿಸಿದರು.