ಸುಳ್ಯ ರೋಟರಿ ಸಂಸ್ಥೆಯಲ್ಲಿ 2024-25 ಸಾಲಿನ ಪ್ರಥಮ ಹಂತದ ಆಡಳಿತ ಮಂಡಳಿಯೊಂದಿಗಿನ ಪೋಷಕ- ಶಿಕ್ಷಕರ ಸಾಮಾನ್ಯ ಸಭೆ ಆ.17 ರಂದು ರೋಟರಿ ಸಭಾಭವನದಲ್ಲಿ ನಡೆಯಿತು.
ಸಭೆಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷೆ ರೊ.ಯೋಗಿತಾ ಗೋಪಿನಾಥ್ ಅಧ್ಯಕ್ಷತೆ ವಹಿಸಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.ಶಾಲಾ ಸಂಚಾಲಕರಾದ ರೊ.ಪ್ರಭಾಕರನ್ ನಾಯರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಟ್ರಸ್ಟ್ ಸದಸ್ಯರಾದ ರೊ.PP.PHF ಸೀತಾರಾಮ ರೈ ಸವಣೂರು, ರೊ.PP.PHF ಗಿರಿಜಾ ಶಂಕರ್ ತುದಿಯಡ್ಕ,ರೊ.PP.PHF ದಯಾನಂದ ಆಳ್ವ,ರೊ.ಮಧುಸೂಧನ್.ಕೆ, ಉಪಸ್ಥಿತರಿದ್ದರು.
ನರ್ಸರಿ , ಕಿರಿಯ ಮತ್ತು ಹಿರಿಯ ಪ್ರಾಥಮಿಕ, ಪ್ರೌಢಶಾಲಾ ಮತ್ತು ಪದವಿ ಪೂರ್ವ ಕಾಲೇಜಿನ ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.ನಂತರ ಪೋಷಕರೊಂದಿಗೆ ಸಂವಾದ ನಡೆಯಿತು.ಪ್ರಾಂಶುಪಾಲೆ ಶೋಭಾ ಬೊಮ್ಮೆಟ್ಟಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ವೀಣಾ ಶೇಡಿಕಜೆ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ರೋಹಿಣಿ ಅಂಬೆಕಲ್ಲು ಉಪಸ್ಥಿತರಿದ್ದು , ಪ್ರಾಸ್ತಾವಿಕವಾಗಿ ಮಾತನಾಡಿ, ಪೋಷಕರ ಸಲಹೆಗಳನ್ನು ಸ್ವೀಕರಿಸಿ, ಸ್ಪಷ್ಟೀಕರಣವನ್ನು ನೀಡಿದರು.ನಂತರ ಪ್ರಸ್ತುತ ಶೈಕ್ಷಣಿಕ ವರ್ಷದ ಪೋಷಕ -ಶಿಕ್ಷಕ ಸಂಘದ ಸದಸ್ಯರ ಆಯ್ಕೆ ಪ್ರಕ್ರಿಯೆ ನಡೆಯಿತು.ಪ್ರೌಢ ಶಾಲಾ ಶಿಕ್ಷಕಿ ಶಾಲಿನಿ ಪ್ರಾರ್ಥಿಸಿದರು.ಶ್ರೀಮತಿ ಸಂಜೀವಿ, ಶ್ರೀಮತಿ ಜಯಶ್ರೀ.ಕೆ, ಶ್ರೀಮತಿ ಜಯಂತಿ ಸ್ವಾಗತಿಸಿ,ಮೌಸಮಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ಆಶಾ ವಂದಿಸಿದರು.ದೀಕ್ಷಿತಾ,ರಮ್ಯಾ ಅಡ್ಕಾರ್, ಶ್ರೀಮತಿ ಪವ್ಯ ನಿರೂಪಿಸಿದರು.