ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿರುವುದು ಖಂಡನೀಯ : ವೆಂಕಟ್ ವಳಲಂಬೆ

0

ಐವನ್ ಡಿ ಸೋಜಾ ವಿವಾದಾತ್ಮಕ ಹೇಳಿಕೆ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್ ಅನುಮತಿ ನೀಡಿದ ನಂತರ ಕಾಂಗ್ರೇಸ್ ಪಕ್ಷದ ನಾಯಕರು ರಾಜ್ಯದಲ್ಲಿ ಅರಾಜಕತೆ ಯನ್ನು ಸೃಷ್ಟಿಸಲು ಯತ್ನಿಸುತ್ತಿದೆಯೆಂದು ಬಿಜೆಪಿ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜಾ ಬೇಜವಾಬ್ದಾರಿ ಯುತವಾಗಿ ನಡೆದುಕೊಂಡಿದ್ದಾರೆ ರಾಜ್ಯಪಾಲರ ಬಗ್ಗೆ ಹಗುರವಾಗಿ ಮಾತನಾಡಿ “ರಾಜ್ಯಪಾಲರನ್ನು ರಾಷ್ಟಪತಿಗಳು ಹಿಂದಕ್ಕೆ ಕಳಿಸದಿದ್ದರೆ ಬಾಂಗ್ಲಾ ಸ್ಥಿತಿ ಬರಲಿದ್ದು,ಅಲ್ಲಿನ ಪ್ರಧಾನಿ ರಾತ್ರೋ ರಾತ್ರಿ ಓಡಿ ಹೋದ ಸ್ಥಿತಿ ನಿಮಗೆ ಬರುತ್ತದೆ ಯೆಂದು ಹೇಳಿಕೆ ನೀಡುವ ಮುಖಾಂತರ ಗಲಭೆಗೆ ಪ್ರಚೋದನೆ ನೀಡಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿ.ಸೋಜಾ ರ ಮೇಲೆ ಪೊಲೀಸ್ ಇಲಾಖೆ ಸುಮೋಟೋ ಕೇಸ್ ದಾಖಲಿಸಬೇಕು ಅಲ್ಲದೆ ಬಸ್ ಗಳಿಗೆ ಕಲ್ಲು ತೂರಾಟ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕೆಂದು ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಲಳಂಬೆ ಒತ್ತಾಯಿಸಿದ್ದಾರೆ.