ಸುಬ್ರಹ್ಮಣ್ಯದಲ್ಲಿ ನದಿ ಪೂಜನ ಕಾರ್ಯಕ್ರಮ

0

ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ವತಿಯಿಂದ ನದಿ ಪೂಜನ ಕಾರ್ಯಕ್ರಮ ಆ.20 ರಂದು ನಡೆಯಿತು.

ಮಲೆನಾಡಿನ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಮಾಡಲಾಗಿದ್ದು, ಪ್ರಕೃತಿಯು ಸನಾತನ ಕಾಲದಿಂದಲೂ ನಮಗೆ ಔಷಧಿ, ಆರೋಗ್ಯ, ಆಹಾರ ಉತ್ಪನ್ನಗಳನ್ನು ನೀಡುತ್ತಾ ನಮ್ಮ ಬದುಕಿನಲ್ಲಿ ಮುಖ್ಯ ಪಾತ್ರವಾಗಿ ಇತ್ತು. ಆದರೆ ನಾವು ಅದನ್ನು ಮರೆತು ರಾಸಾಯನಿಕ ಬಳಕೆಯಿಂದ ಪ್ರಕೃತಿ ನಾಶ ಮಾಡಿದ್ದರಿಂದ ಪ್ರಕೃತಿ ವಿಕೋಪ ಎಂಬ ಭಯಾನಕ ಘಟನೆಗಳು ನಡೆಯುತ್ತಿದೆ. ಇದರಿಂದ ರಕ್ಷಣೆ ಪಡೆಯಲು ಮತ್ತು ನಮ್ಮ ಜಲ, ನೆಲದ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ ಈ ಪೂಜನ ಕಾರ್ಯಕ್ರಮ ಆಯೋಜಿಸಿದ್ದೇವೆ. ನಮ್ಮ ನೆಲ ಜಲ ಸಂಸ್ಕೃತಿ ಬದುಕಿನ ರಕ್ಷಣೆಗಾಗಿ ನಮ್ಮ ಹೋರಾಟ ಎಂದು ಈ ಕಾರ್ಯಕ್ರಮದ ಸಂಯೋಜಕ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಜಿಲ್ಲಾ ಪ್ರಮುಖ ಮಾಧವ ಚಾಂತಾಳ ಹಾಗೂ ಮಲೆನಾಡು ಜನ ಹಿತರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸಭೆಯನ್ನು ಉದ್ದೇಶಿಸಿ ತಿಳಿಸಿದರು.

ಈ ಸಂದರ್ಭ ಹರಿಹರೇಶ್ವರ ದೇವಸ್ಥಾನ ವ್ಯವಸ್ಥಾಪನಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು,  ಜಯಪ್ರಕಾಶ್ ಕುಜುಗೂಡು, ಅಚ್ಯುತ ಗೌಡ, ಸುಬ್ರಹ್ಮಣ್ಯ ಗ್ರಾಮಪಂಚಾಯಿತಿ ಉಪಾಧ್ಯಕ್ಷ ವೆಂಕಟೇಶ್ ಹೆಚ್. ಎಲ್, ಗ್ರಾ. ಪಂ,ಸದಸ್ಯೆ ಭಾರತಿ ದಿನೇಶ್, ಗಿರೀಶ್ ಪೈಲಾಜೇ, ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ  ಪವನ್, ರೋಟರಿ  ಕ್ಲಬ್ ಗೋಪಾಲ್ ಎಣ್ಣೆಮಜಲು, ಸಮಾಜ ಸೇವಕ ರವಿ ಕಕ್ಕೇಪದವು, ಶೋಭಾ ನಲ್ಲೂರಾಯ, ವನಜ ಭಟ್, ಅಶೋಕ ಮೂಲೆಮಜಲು ಮತ್ತಿತರರು ಉಪಸ್ಥಿತರಿದ್ದರು.