ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಟೆಕ್ಸ್ ಟೈಲ್ಸ್ ಶುಭಾರಂಭ

0

ಸುಳ್ಯದ ಶ್ರೀ ಹರಿ ಕಾಂಪ್ಲೆಕ್ಸ್ ನಲ್ಲಿ ಶ್ರೀಮತಿ ಕೃತಿಕಾ ರವರ ಮಾಲಕತ್ವದ ಮಹಿಳೆಯರ ಸಿದ್ಧ ಉಡುಪುಗಳ ವಸ್ತ್ರ ಮಳಿಗೆ ಶ್ರೀ ಲಕ್ಷ್ಮೀ ಟೆಕ್ಸ್ ಟೈಲ್ಸ್ ಆ‌.22 ರಂದು ಶುಭಾರಂಭಗೊಂಡಿತು.

ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ದೀಪ ಪ್ರಜ್ವಲಿಸಿದರು.
ಮುಖ್ಯ ಅತಿಥಿಗಳಾಗಿ ಅಮರಜ್ಯೋತಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಯಶೋಧ ರಾಮಚಂದ್ರ, ಕಸ್ತೂರಿ ನರ್ಸರಿ ಮಾಲಕಿ ಶ್ರೀಮತಿ ಲತಾ ಮಧುಸೂದನ್ ಕುಂಭಕೋಡು, ಕ್ಷಮ್ಯಾ ಕ್ಲಿನಿಕ್ ವೈದ್ಯೆ ಡಾ.ಕ್ಷಮ್ಯಾ ಅಡ್ಕಾರ್, ಹಿರಿಯರಾದ ಶ್ರೀಮತಿ ಜಯಂತಿ ಕನಕಮಜಲು, ಶ್ರೀಮತಿ ಚಿತ್ರಾ ಸುಳ್ಯ, ಚಾರ್ಟರ್ಡ್ ಅಕೌಂಟೆಂಟ್ ರವೀಂದ್ರ ಕೇವಳ, ಉದ್ಯಮಿ ಶರತ್ ಅಡ್ಕಾರ್,ಉದ್ಯಮಿ ಅನೂಪ್ ಪಾಪ್ಯುಲರ್,

ಸುದ್ದಿ ಸಂಪಾದಕ
ಹರೀಶ್ ಬಂಟ್ವಾಳ್, ರಂಗಮಯೂರಿ ಕಲಾ ಶಾಲೆಯ ಸಂಚಾಲಕ ಲೋಕೇಶ್ ಊರುಬೈಲು, ಲಕ್ಷ್ಮೀ ಅಟೋ ಮೊಬೈಲ್ ಮಾಲಕ ಅಜಿತ್ ಅಂಜಿಕ್ಕಾರ್, ಸ್ನೇಹ ಮೆನ್ಸ್ ಪಾರ್ಲರ್ ಮಾಲಕ
ದೀಪಕ್ ಜಟ್ಟಿಪಳ್ಳ,
ಆನಂದ ಪಾತಿಕಲ್ಲು, ಮಧು ಅಂಜಿಕ್ಕಾರ್, ಮೋನಿಷ್ ಉಪಸ್ಥಿತರಿದ್ದರು.
ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸ್ಕರವಾಗಿ ತೆರೆಯಲ್ಪಟ್ಟ ಮಳಿಗೆಯಾಗಿದ್ದು ಪ್ರಸಿದ್ಧ ಕಂಪನಿಯ ಸಾರಿಗಳು ಮತ್ತು ಸಿದ್ಧ ಉಡುಪುಗಳು ಕೈ ಗೆಟುಕುವ ಬೆಲೆಗೆ ಲಭ್ಯವಿರುವುದಾಗಿ ಮಾಲಕಿ ಕೃತಿಕಾ ರವರು ತಿಳಿಸಿದರು.