ಪಂಜ ಮೆಸ್ಕಾಂ ಕಚೇರಿಯಲ್ಲಿ ಕೃಷಿ ಪಂಪ್ ಸೆಟ್ ಗಳಿಗೆ ಆಧಾರ್ ಜೋಡಣೆ ಕಾರ್ಯಕ್ರಮ

0

ಕೃಷಿ ಪಂಪ್ ಸೆಟ್ ನ ಕೃಷಿ ನೀರಾವರಿ ವಿದ್ಯುತ್ ಸ್ಥಾವರಕ್ಕೆ ಆಧಾರ್ ನಂಬರ್ ಜೋಡಣೆ ಕಾರ್ಯಕ್ರಮ ಪಂಜ ಧರ್ಮ ಶ್ರೀ ಕಾಂಪ್ಲೆಕ್ಸ್ ನಲ್ಲಿರುವ ಮೆಸ್ಕಾಂ ಶಾಖಾ ಕಛೇರಿಯಲ್ಲಿ ಆ.23 ರಂದು ಮುಂಜಾನೆ ಆರಂಭ ಗೊಂಡಿದ್ದು ಸಂಜೆ 3.30 ರ ತನಕ ನಡೆಯಲಿದೆ.

ಮುಂಜಾನೆಯಿಂದಲೇ ಕೃಷಿ ಪಂಪ್ ಸೆಟ್ ಗ್ರಾಹಕರು ಸರದಿ ಸಾಲಿನಲ್ಲಿ ಬಂದು ಆಧಾರ್ ನಂಬರ್ ಜೋಡಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದಾರೆ.

ಲಭ್ಯವಿರುವ ಸಂಬಂದಪಟ್ಟ ಒಪ್ಪಂದ ಪತ್ರದಲ್ಲಿ ನಿಮ್ಮ ಆಧಾರ್ ಸಂಖ್ಯೆಯನ್ನು ಬರೆದು ಸಹಿ ಮಾಡುವುದು.(ತಾವುಗಳು ಬರುವಾಗ ನೀರಾವರಿಯ ಪಂಪಿನ ನೊಂದಾಯಿತ ಗ್ರಾಹಕರು ಮರಣ ಹೊಂದಿದ್ದಲ್ಲಿ ಅವರ ಮರಣ ಪ್ರಮಾಣ ಪತ್ರ ಮತ್ತು ಆರ್ ಟಿ ಸಿ ಇದ್ದಲ್ಲಿ ಲಗತ್ತಿಸುವುದು.)


ಕೃಷಿ ಪಂಪ್ ಸೆಟ್ ಗ್ರಾಹಕರು ಸದುಪಯೋಗ ಪಡೆದುಕೊಳ್ಳಲು ತಿಳಿಸಿದ್ದಾರೆ.