ಹಳೆಗೇಟು: ಬಿದ್ದು ಸಿಕ್ಕಿದ ಪರ್ಸನ್ನು ವಾರಿಸುದಾರರಿಗೆ ಹಸ್ತಾಂತರ

0

ಹಳೆಗೇಟು: ಸೇತುವೆ ಸಮೀಪ ಆ.22 ರಂದು ರಸ್ತೆಯಲ್ಲಿ ಬಿದ್ದು ಸಿಕ್ಕಿದ ಪರ್ಸನ್ನು ಅಬ್ದುಲ್ ಗಫೂರ್ ಕುಂಬರ್ಚೋಡು ರವರು ವಾರಿಸುದಾರರಿಗೆ ಆ 23 ರಂದು ಹಸ್ತಾಂತರಿಸಿದ್ದಾರೆ.

ಪರ್ಸ್ ನಲ್ಲಿ ಅಲ್ಪ ನಗದು ಹಾಗೂ ಇತರ ಧಾಖಲೆಗಳು ಇದ್ದವು. ಈ ಪರ್ಸ್ ಗಫೂರ್ ರವರಿಗೆ ಸಿಕ್ಕಿದ್ದು ವಾರಿಸುದಾರರು ಅವರನ್ನು ಸಂಪರ್ಕಿಸುವಂತೆ ಸ್ಥಳೀಯ ವಾಟ್ಸ್ ಯ್ಯಾಪ್ ಗ್ರೂಪ್ ಗಳಲ್ಲಿ ಮಾಹಿತಿ ನೀಡಿ ಅವರ ಫೋನ್ ನಂಬರ್ ನೀಡಿದ್ದರು.

ಪರ್ಸ್ ಕಳೆದುಕ್ಕೊಂಡಿದ್ದ ಬಂಟ್ವಳ ನಿವಾಸಿ ಇಸ್ಮಾಹಿಲ್ ಎಂಬವರು ಗಫೂರ್ ರವರನ್ನು ಸಂಪರ್ಕಿಸಿ ಕಳೆದುಕ್ಕೊಂಡಿದ್ದ ಪರ್ಸನ್ನು ಪಡೆದುಕ್ಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮೊಹಿದ್ದೀನ್ ಪಂಡಿತ್, ಅನ್ವರ್ ಜಯನಗರ ಮತ್ತಿತರರು ಉಪಸ್ಥಿತರಿದ್ದರು.