ಮಸೀದಿ ಕಮಿಟಿಯಿಂದ ಸುಬ್ರಹ್ಮಣ್ಯ ಠಾಣೆಗೆ ದೂರು
ಡಿ.ವೈ.ಎಸ್.ಪಿ. ಎಲಿಮಲೆಗೆ ಭೇಟಿ
ಎಲಿಮಲೆ ಜುಮ್ಮಾ ಮಸೀದಿ ವಠಾರಕ್ಕೆ ಆ. 22 ರಂದು ರಾತ್ರಿ ಇಬ್ಬರು ವ್ಯಕ್ತಿಗಳು ಬಂದು ವಿದ್ಯಾರ್ಥಿಗಳಿಗೆ ಬೆದರಿಕೆ ಒಡ್ಡಿ ಹೋಗಿದ್ದಾರೆಂದು ಮಸೀದಿ ಕಮಿಟಿಯವರು ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ತಿಳಿದು ಬಂದಿದೆ.
ಎಲಿಮಲೆ ಜುಮ್ಮಾ ಮಸೀದಿಗೆ ನಿನ್ನೆ ರಾತ್ರಿ ಸುಮಾರು 11 ಘಂಟೆಗೆ ಬಂದ ಇಬ್ಬರು ಕಿಡಿಗೇಡಿ ವ್ಯಕ್ತಿಗಳು ಮಸೀದಿಯ ಆವರಣದಲ್ಲಿ ನಿಂತು ಜೋರಾದ ಬೈದು ಬೆದರಿಕೆ ಹಾಕಿರುವುದಾಗಿ ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಸತೀಶ್ ಗುಡ್ಡನಮನೆ ಮತ್ತು ಇತರರು ಈ ಕೃತ್ಯ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಎರಡು ದಿನ ಮೊದಲು ಮಸೀದಿಯ ವಿದ್ಯಾರ್ಥಿಗಳು ಶಾಲೆಗೆ ಹೋಗುವ ವೇಳೆ ರಸ್ತೆಯಲ್ಲಿ ಇಬ್ಬರು ಅಡ್ಡಗಟ್ಟಿ ನೀವು ಈ ರೀತಿಯ ಟೋಪಿಗಳನ್ನು ಧರಿಸಿ ಶಾಲೆಗೆ ಹೋಗಬಾರದು ಎಂದು ಹೆದರಿಸಿದ್ದರು ಎಂದೂ
ಸುಬ್ರಮಣ್ಯ ಪೋಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಗೆ ಸಂಬಂಧಿಸಿ ಇಂದು ಸುಬ್ರಮಣ್ಯ ಎಸ್.ಐ. ಕಾರ್ತಿಕ್, ಪುತ್ತೂರು ಡಿ ವೈ ಎಸ್ ಪಿ ಹಾಗೂ ಇತರ ಅಧಿಕಾರಿಗಳು ಮಸೀದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.