ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ : ಮುರಳ್ಯ ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಮತ್ತು ಹಿರಿಯ ವಿಭಾಗದಲ್ಲಿ ತೃತೀಯ ಸಮಗ್ರ

0

ಆ. 23ರಂದು ಎಣ್ಮೂರು ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿಯಲ್ಲಿ
ಮುರಳ್ಯ ಶಾಂತಿನಗರ ಶಾಲೆಗೆ ಕಿರಿಯ ವಿಭಾಗದಲ್ಲಿ ದ್ವಿತೀಯ ಸಮಗ್ರ ಮತ್ತು ಹಿರಿಯ ವಿಭಾಗದಲ್ಲಿ ತೃತೀಯ ಸಮಗ್ರ ಪ್ರಶಸ್ತಿ ಲಭಿಸಿದೆ.


ಎಡಮಂಗಲ ಸ.ಹಿ.ಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಕ್ರಾರ್ಯಕ್ರಮದಲ್ಲಿ
ಹಿರಿಯ ವಿಭಾಗ
ಅಶುಭಾಷಣ ದಿಶಾ ಡಿಂಪಲ್ ಪ್ರಥಮ, ಅಭಿನಯ ಗೀತೆ ತೃಪ್ತಿ ಎನ್
ಪ್ರಥಮ, ಅರೇಬಿಕ್ ಧಾರ್ಮಿಕ ಪಠಣ ಮಹಮ್ಮದ್ ಇನಾಜ್ ಪ್ರಥಮ, ಹಿಂದಿ ಕಂಠಪಾಠ ಸೋವಿತ್ ತೃತೀಯ, ಪ್ರಬಂಧ ನಿರೀಕ್ಷಾ ಪಿ ತೃತೀಯ,
ಕವನವಾಚನ ತೃತೀಯ ಅಶ್ಮಿತ ಭಕ್ತಿಗೀತೆ ತೃತೀಯ ಸಹನ್ಯ, ದೇಶಭಕ್ತಿಗೀತೆ ತೃತೀಯ ಸಹನ್ಯ ಪಡೆದುಕೊಂಡಿದ್ದಾರೆ.
ಕಿರಿಯ ವಿಭಾಗದಲ್ಲಿ
ಅರೇಬಿಕ್ ಧಾರ್ಮಿಕ ಪಠಣ ಪ್ರಥಮ ಝೋಯಾ ಫಾತಿಮಾ,
ಕನ್ನಡ ಕಂಠಪಾಠ ದ್ವಿತೀಯ ಝೂಯಾ ಫಾತಿಮಾ, ಇಂಗ್ಲಿಷ್ ಕಂಠಪಾಠ ಮಹಮ್ಮದ್ ಸುಹೈಲ್ ದ್ವಿತೀಯ, ಕ್ಲೇ ಮಾಡೆಲಿಂಗ್ ನಲ್ಲಿ ಅವಿತೇಜ ದ್ವಿತೀಯ,
ಛದ್ಮವೇಷದಲ್ಲಿ ಹಿಮಾಂತ ಹೆಚ್ ತೃತೀಯ, ಭಕ್ತಿಗೀತೆ ಚರಿಷ್ಮಾ ತೃತೀಯ, ಕಥೆ ಹೇಳುವುದರಲ್ಲಿ ಧನ್ವಿ ಹೆಚ್ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.