ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಸಂಘ ಸಿ. ಐ.ಟಿ.ಯು ಸುಳ್ಯ ವತಿಯಿಂದ ಕೆ. ಪಿ. ಜಾನಿಯವರಿಗೆ ಸನ್ಮಾನ

0

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕ ಸಂಘ ( ರಿ) ಸಿ. ಐ.ಟಿ.ಯು((ಸಿ. ಡಬ್ಲ್ಯೂ, ಎಫ್. ಐ)ಸುಳ್ಯ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಮಂಡಳಿ ಸದಸ್ಯರಾಗಿ ಮುಖ್ಯ ಮಂತ್ರಿಗಳಿಂದ ನಿಯೋಜನೆಗೊಂಡ ಕೆ. ಪಿ. ಜಾನಿಯವರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯ್ರಮವು ಆ.25 ರಂದು ಸುಳ್ಯದ ಶಿವಕೃಪಾ ಕಲಾ ಮಂದಿರಲ್ಲಿ ನಡೆಯಿತು.

ಕಾರ್ಯಕ್ರಮವು ಸುಳ್ಯ ತಾಲೂಕು ಕಟ್ಟಡ ಮತ್ತು ಕಾರ್ಮಿಕ ಸಂಘ ಸಿ. ಐ.ಟಿ.ಯು (ಸಿ. ಡಬ್ಲ್ಯೂ, ಎಫ್. ಐ) ಅಧ್ಯಕ್ಷ ವಿಶ್ವ ನಾಥ್ ನೆಲ್ಲಿ ಬಂಗಾರಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು.ಬಳಿಕ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಜೆಡಿಎಸ್ ರಾಜ್ಯ ವಕ್ತಾರರು ಹಾಗೂ ಉಪಾಧ್ಯಕ್ಷರಾದ ಎಂ. ಬಿ ಸದಾಶಿವ ಅವರು ಮಾತನಾಡಿ ” ಕೆ. ಪಿ. ಜಾನಿಯವರನ್ನು ಅಭಿನಂದನಾ ಕಾರ್ಯಕ್ರಮವು ಇಂದು ಆಯೋಜನೆಗೊಂಡಿದ್ದುತುಂಬಾ ಸಂತೋಷವಾಗುತ್ತಿದೆ. ಅದರಲ್ಲೂ ಕೆ. ಪಿ.ಜಾನಿಯವರು ನಾನು ನೋಡಿದಲ್ಲಿ ಸಮಾಜ ಸೇವಕ, ಅವರು ದುಡಿಯುವ ಕಾಯಕವನ್ನು ಕಲಿತವರು , ಸುಳ್ಯದಲ್ಲಿ ಕಾರ್ಮಿಕರ ಹೋರಾಟ ಮಾಡಿದ ನಾಯಕ .ಇಂದು ಸುಳ್ಯದಲ್ಲಿ ಕಾರ್ಮಿಕ ಸಂಘಟನೆ ಬೆಳೆದು ನಿಂತರೆ ಕೆ. ಪಿ ಜಾನಿಯವರ ಪಾತ್ರ ಮುಖ್ಯವಾಗಿದೆ. ಅವರು ತಮ್ಮ ಮನೆಯವರಿ ಗಿಂತ ಕಾರ್ಮಿಕರ ಪರವಾಗಿಯೇ ನಿಂತಿದ್ದಾರೆ. ಹಾಗೂ ವಿವಿಧ ಅಧಿಕಾರಿಗಳನ್ನು ಭೇಟಿ ಮಾಡಿ ನಾಡಿಗೆ ಮತ್ತು ಬಡವರ ಪರ ಅಭಿವೃದ್ಧಿಯತ್ತ ಕೆಲಸ ಕಾರ್ಯಗಳು ಮಾಡುತ್ತಿದ್ದಾರೆ. ಇನ್ನೂ ಕೂಡಾ ಕೆ. ಪಿ. ಜಾನಿಯವರು ಕರ್ನಾಟಕ, ಮತ್ತು ಇತರ ರಾಜ್ಯಗಳಲ್ಲಿಯೂ ಎತ್ತರಕ್ಕೆ ಬೆಳೆದು ಅವರ ಸಾಧನೆ ಮತ್ತು ಶ್ರಮದ ಫಲಶೃತಿ ಪರಿಚಯವಾಗಲಿ” ರಂದು ಅಭಿನಂದನಾ ಮಾಗಳನ್ನಾಡಿದರು.

ಬಳಿಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಮಂಡಳಿ ಸದಸ್ಯರಾಗಿ ಆಯ್ಕೆಯಾದ ಕೆ. ಪಿ.ಜಾನಿಯ ವರನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಸುಳ್ಯ ತಾಲೂಕು ಕಟ್ಟಡ ಮತ್ತು ಕಾರ್ಮಿಕ ಸಂಘ ಸಿ. ಐ.ಟಿ.ಯು (ಸಿ. ಡಬ್ಲ್ಯೂ, ಎಫ್. ಐ) ಅಧ್ಯಕ್ಷ ವಿಶ್ವ ನಾಥ್ ನೆಲ್ಲಿ ಬಂಗಾರಡ್ಕ ಮಾತನಾಡಿ “ಸುಮಾರು 28 ವರ್ಷಗಳಲ್ಲಿ ಸುಳ್ಯ ತಾಲೂಕಿನಲ್ಲಿ ಎಲ್ಲಾ ರೀತಿಯಲ್ಲಿ ಸಹಕರಿಸಿ ಕಾರ್ಮಿಕರ ಪರ ನಿಂತವರು. ಮಂಗಳೂರಿನಿಂದ ಬೆಂಗಳೂರಿನ ತನಕ ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಹೋರಾಡಿದವರು. ಸ್ವತಃ ಅನೇಕ ತನ್ನ ಜೀವನವನ್ನೇ ಮರೆತು, ಕುಟುಂಬಗಳಲ್ಲಿ ಯಾವುದೇ ಕಷ್ಟಗಳನ್ನು ಮರೆತು ತನ್ನ ವ್ಯಕ್ತಿತ್ವವನ್ನು ಬೆಳೆಸಿದವರು. ಇನ್ನೂ ಕೂಡಾ ರಾಜ್ಯದಲ್ಲಿ ಉನ್ನತ ಸಾಧನೆ ಮಾಡಲಿ” ಎಂದು ಶುಭಹಾರೈಸಿದರು

ಕೆ. ಪಿ. ಜಾನಿ ಯವರು ಮಾತನಾಡಿ ನಾನು ಬೆಳೆದು ಬಂದ ಹಾದಿಗಳೇ ಕಷ್ಟ ಗಳು . ನಾನು ಹೆಚ್ಚಾಗಿ ಕಾರ್ಮಿಕ ಸಂಘಟನೆಯಲ್ಲಿಯೇ ತೊಡಗಿದ್ದೇನೆ, ಬಡವರಿಗೆ , ಕಾರ್ಮಿಕರಿಗೆ ಮತ್ತು ಅವರ ಕುಟುಂಬಗಳಿಗೆ ಏನೇನು ಸರಕಾರದಿಂದ ಬರುವ ಅನುಕೂಲಗಳು, ಸೌಲತ್ತು ಗಳನ್ನೂ ತಂದು ಕೊಡುವುದು ನನ್ನ ಹೋರಾಟದ ಮುಖ್ಯ ಉದ್ದೇಶವಾಗಿತ್ತು . ಈಗ ನನಗೆ ಸಿಕ್ಕಿದ ರಾಜ್ಯದ ಸದಸ್ಯ ಸ್ಥಾನ ನಿಮ್ಮ ಪ್ರತಿಯೊಬ್ಬರ ಆಶೀರ್ವಾದ .ಸದಾ ನನ್ನ ಮನೆಯವರು ಎಂದು ಭಾವಿಸಿ ಒಟ್ಟಿಗೆ ನಿಲ್ಲುತ್ತೇನೆ. ಇನ್ನೂ ಕೂಡಾ ನಿಮ್ಮ ಜೊತೆ ಸದಾ ಇದ್ದು ಕಾರ್ಮಿಕ ಸಂಘಟನೆಗಳು ಬಲಿಷ್ಠ ವಾಗುವಲ್ಲಿ ಹೋರಾಡುತ್ತೇನೆ “ಎಂದು ಹೇಳಿದರು.

. ವೇದಿಕೆಯಲ್ಲಿ ರಾಜ್ಯ ಮಹಿಳಾ ಮಂಡಳಿ ಸಮಿತಿ ಸದಸ್ಯೆ ಶ್ರೀಮತಿ ಭಾರತಿ ಚೆಂಬು, ರಾಜ್ಯ ಸಮಿತಿ ಸದಸ್ಯ ಬಿಜು ಅಗಸ್ಟೀನ್, ಹಿರಿಯ ಕಾರ್ಮಿಕ ಕೃಷ್ಣ ಮೇಸ್ತ್ರಿ, ಸುಳ್ಯ ವಲಯ ಕಾರ್ಮಿಕ ಸಂಘದ ಖಜಾಂಜಿ ಗಣೇಶ್ .ವಿ. ಕೊಡಿಯಾಲ ಬೈಲ್, ಸಂಪಾಜೆ ವಲಯ ಕಾರ್ಮಿಕ ಕಟ್ಟಡ ಸಂಘದ ಅಧ್ಯಕ್ಷ ಶ್ರೀಧರ ಕೆ. ಜೆ, ಸುಳ್ಯ ತಾಲೂಕು ರೈತ ಸಂಘ ಉಪಾಧ್ಯಕ್ಷ ಮಾಧವ ಗೌಡ ಸುಳ್ಯ ಕೋಡಿ, ಸಂಪಾಜೆ ಗ್ರಾಂ.ಪಂ ಸದಸ್ಯೆ ಲಿಸಿ ಮೊನಾಲಿಸಾ , ನಾರ್ಣಕಜೆ ಕಟ್ಟದ ಮತ್ತು ಕಾರ್ಮಿಕ ಸಂಘ ಉಪಾಧ್ಯಕ್ಷ ಆನಂದ ಗೌಡ ಮೇಸ್ತ್ರಿ, ಅಬೂಬಕ್ಕರ್ ಜಟ್ಟಿ ಪ್ಪಳ್ಳ, ಬೊಜಪ್ಪ ಗೌಡ ಬಾಲಂಬಿ, ಹರಿಶ್ಚಂದ್ರ ಪಂಡಿತ್ ಸುಳ್ಯ, ಶಿವರಾಮ ಗೌಡ ಹೇಮನಾಥ್ ಎಲಿಮಲೆ, ನೆಲ್ಸನ್ ಮೇಸ್ತ್ರಿ ಸುಳ್ಯ,ಮತ್ತು ಪದಾಧಿಕಾರಿಗಳು , ಸರ್ವ ಸದಸ್ಯರು ಉಪಸ್ಥಿತರಿದ್ದರು.

ತಾಲೂಕು ಕಾರ್ಮಿಕ ಸಂಘದ
(ಸಿ. ಡಬ್ಲ್ಯೂ, ಎಫ್. ) ಪ್ರಧಾನ ಕಾರ್ಯದರ್ಶಿ ವಸಂತ ಪೆಲ್ತಡ್ಕ ಸ್ವಾಗತಿಸಿ , ತಾಲೂಕು ಕಾರ್ಮಿಕ ಮತ್ತು ಕಟ್ಟಡ ಸಂಘ ಸಿ. ಐ.ಟಿ.ಯು (ಸಿ. ಡಬ್ಲ್ಯೂ, ಎಫ್.) ಖಜಾಂಜಿ ಗಣೇಶ್ ವಿ. ಕೊಡಿಯಾಲ ಬೈಲು ವಂದಿಸಿದರು.