ಅರಂತೋಡು ಗ್ರಾಮ ಪಂಚಾಯತ್ ನ ಮಹತ್ವಕಾಂಕ್ಷಿ ಅಭಿಯಾನವಾದ ರಾಷ್ಟ್ರೀಯ ಹೆದ್ದಾರಿ ಬದಿ ಸ್ವಚ್ಛತಾ ಅಭಿಯಾನ ಇಂದು ಅರಂತೋಡು ಸಹಕಾರಿ ಸಂಘ ಮತ್ತು ಇತರ ಸಂಘ ಸಂಸ್ಥೆಗಳ ನೆರವಿನಿಂದ ನಡೆಯಿತು.
ಆದರೆ ಈ ಸ್ವಚ್ಛತಾ ಕಾರ್ಯ ನಡೆಯುವ ಬೆಳಿಗ್ಗೆ 7.30ರ ಮೊದಲೇ ತನ್ನ ಅಂಗಡಿಯ ಎದುರಿನ ರಸ್ತೆ ಬದಿ ಹುಲ್ಲು,ಕಸ ಕಡ್ಡಿ, ಸ್ವಚ್ಛ ಮಾಡಿ ಸ್ವತಹ ಬಟ್ಟಿ ಎಳೆದು ಕೊಂಡು ಹೋಗಿ ಎಲ್ಲರಿಗೆ ಮಾದರಿಯಾದವರು, ಅರಂತೋಡಿನ ಹಿರಿಯ ಪತ್ರಿಕಾ ವಿತರಕ, ಸುದ್ದಿ ಏಜೆಂಟ್, ವ್ಯಾಪಾರೋದ್ಯಮಿ 93 ವರ್ಷ ವಯಸ್ಸಿನ ಮೆರ್ಕಜೆ ಸುಮಿತ್ರ ಗೌಡರವರು.
ಸ್ವಚ್ಛತೆಯ ಬಗ್ಗೆ ಸಾರ್ವಜನಿಕವಾಗಿ ಭಾಷಣ ಬಿಗಿಯುವ, ಸೋಶಿಯಲ್ ಮೀಡಿಯಾದಲ್ಲಿ ದೂರದಲ್ಲಿ ಎಲ್ಲೋ ನಡೆದ ಘಟನೆಯ ಬಗ್ಗೆ ಮೆಸೇಜ್ ಫಾರ್ವರ್ಡ್ ಜನ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕ, ಸಿಕ್ಕಲ್ಲಿ, ಎಲ್ಲಿಂದರಲ್ಲಿ ಕಸ ಬಿಸಾಡುತ್ತಾರೆ. ಆದರೆ ಈ ಇಳಿ ವಯಸ್ಸಿನಲ್ಲೂ ಇಂತಹ ಹಿರಿಯರು ಮಾದರಿ, ಆದರ್ಶಪ್ರಾಯರು ಎಂದು ಅರಂತೋಡು ಪಂಚಾಯತ್ ನ ಅನೇಕರು ಕೊಂಡಾಡಿದ್ದಾರೆ.