ನಿವೃತ್ತ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರುರಿಗೆ ಸನ್ಮಾನ
ಶ್ರೀ ಕೃಷ್ಣ ಮಂದಿರ ಕೊಯಿಕುಳಿ, ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗ್ಗಲಡ್ಕ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಧಾರ್ಮಿಕ ಕಾರ್ಯಕ್ರಮ ಮತ್ತು ಕ್ರೀಡಾ ಕೂಟ ಕೊಯಿಕುಳಿ ಶ್ರೀ ಕೃಷ್ಣ ಮಂದಿರದ ವಠಾರದಲ್ಲಿ ಆ.೨೬ರಂದು ನಡೆಯಿತು.
ಕಾರ್ಯಕ್ರಮವು ಬೆಳಿಗ್ಗೆ ಗಣಪತಿಹವನದೊಂದಿಗೆ ಆರಂಭಗೊಂಡಿತು. ಬಳಿಕ ಭಜನಾ ಕಾರ್ಯಕ್ರಮ ನಡೆಯಿತು.
ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ವಿಷ್ಣುಕಿರಣ ಭಟ್ ನೀರಬಿದಿರೆ ನೆರವೇರಿಸಿದರು. ಮಿತ್ರ ಯುವಕ ಮಂಡಲದ ಅಧ್ಯಕ್ಷ ತೀರ್ಥರಾಮ ಕೊಯಿಕುಳಿ ಸಭಾಧ್ಯಕ್ಷತೆ ವಹಿಸಿದ್ದರು.ನ.ಪಂ.ನಾಮನಿರ್ದೇಶನ ಸದಸ್ಯರಾದ ಭಾಸ್ಕರ ಪೂಜಾರಿ ಬಾಜಿನಡ್ಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ,ಅಧ್ಯಕ್ಷ ರಮೇಶ್ ನೀರಬಿದಿರೆ, ಕಾರ್ಯದರ್ಶಿ ಕೆ.ಟಿ.ಭಾಗೀಶ್, ಶ್ರೀ ಕೃಷ್ಣ ಮಂದಿರದ ಅಧ್ಯಕ್ಷ ಶಶಿಧರ ಎಂ.ಜೆ., ಯುವಕ ಮಂಡಲದ ಕಾರ್ಯದರ್ಶಿ ಜಯಂತ ಕೊಯಿಕುಳಿ, ಕೋಶಾಧಿಕಾರಿ ಚಂದ್ರನ್ ಕೂಟೇಲು ಉಪಸ್ಥಿತರಿದ್ದರು.
ಅನನ್ಯ ಜಯರಾಜ್ ಮತ್ತು ಅಂಜನಾ ಜಯರಾಜ್ ಪ್ರಾರ್ಥಿಸಿದರು. ಮಂದಿರದ ಕಾರ್ಯದರ್ಶಿ ಭವಾನಿಶಂಕರ ಕಲ್ಮಡ್ಕ ಸ್ವಾಗತಿಸಿ, ಕುರಲ್ ತುಳುಕೂಟದ ಕೋಶಾಧಿಕಾರಿ ಪ್ರಿಯಾ ಸದಾನಂದ ವಂದಿಸಿದರು. ಯುವಕ ಮಂಡಲದ ಮಾಜಿ ಅಧ್ಯಕ್ಷ ಮನೋಜ್ ಪಾನತ್ತಿಲ ಕಾರ್ಯಕ್ರಮ ನಿರೂಪಿಸಿದರು.
ಮಧಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ಸಮಾರೋಪ ಸಮಾರಂಭ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ದುಗ್ಗಲಡ್ಕ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಂತರ ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲಾ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ರಾಮಕೃಷ್ಣ ಭಟ್ ಚೂಂತಾರುರವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕುರಲ್ ತುಳುಕೂಟದ ಅಧ್ಯಕ್ಷ ರಮೇಶ್ ನೀರಬಿದಿರೆ ವಹಿಸಿದ್ದರು. ಮಂಗಳೂರಿನ ಉದ್ಯಮಿ ಉಮೇಶ್ ಬಿ.ಕಾಮತ್ ಬಹುಮಾನ ವಿತರಿಸಿದರು. ನ.ಪಂ.ಸದಸ್ಯೆ ಶ್ರೀಮತಿ ಶಶಿಕಲಾ ನೀರಬಿದಿರೆ, ನಿವೃತ್ತ ತಾಂತ್ರಿಕ ಕೃಷಿ ಅಧಿಕಾರಿ ಮೋಹನ ನಂಗಾರು, ಸುಳ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಕೇಶ್ ಪೆರ್ಲಂಪಾಡಿ, ಸುಳ್ಯ ಓಂ ಶಕ್ತಿ ಎಂಟರ್ ಪ್ರೈಸಸ್ ಮಾಲಕ ಆರ್ ಜಗದೀಶ್, ಮಲ್ಲಿಕಾರ್ಜುನ ಕನ್‌ಸ್ಟ್ರಕ್ಷನ್ ಮಾಲಕ ಅಶ್ವನ್ ಎನ್.ಎ. ನಡುಮುಟ್ಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಶುಭ ಹಾರೈಸಿದರು.ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂದಿರದ ಅಧ್ಯಕ್ಷ ಶಶಿಧರ ಎಂ.ಜೆ.ಸ್ವಾಗತಿಸಿ, ಭವಾನಿಶಂಕರ ಕಲ್ಮಡ್ಕ ವಂದಿಸಿದರು. ಕುರಲ್ ತುಳುಕೂಟದ ಗೌರವಾಧಕ್ಷೆ ನವ್ಯ ದಿನೇಶ್ ಕೊಯಿಕುಳಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಭಜನಾ ಕಾರ್ಯಕ್ರಮ ನಡೆದು ಪ್ರಸಾದ ವಿತರಿಸಲಾಯಿತು.
ಮೆರುಗು ತುಂಬಿದ ಶ್ರೀ ಕೃಷ್ಣ ವೇಷ ಸ್ಪರ್ಧೆ
ಕಾರ್ಯಕ್ರಮದ ನಿಮಿತ್ತ ಶ್ರೀ ಕೃಷ್ಣ ವೇಷ ಸ್ಪರ್ಧೆ ಆಯೋಜಿಸಲಾಗಿತು. ಸುಮಾರು ೨೦ ಮಂದಿ ವೇಷಧಾರಿ ಪುಟಾಣಿಗಳು ಅಭಿನಯ ಮಾಡಿ ರಂಜಿಸಿದರು.
ಮಳೆಯನ್ನು ಲೆಕ್ಕಿಸದೆ ನೂರಾರು ಮಂದಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಭಜನಾ ಕಾರ್ಯಕ್ರಮವನ್ನು ಅಯ್ಯಪ್ಪ ಭಜನಾ ಮಂದಿರ ದುಗ್ಗಲಡ್ಕ ಮತ್ತು ಶ್ರೀ ದುಗ್ಗಲಾಯ ಮಹಿಳಾ ಭಜನಾ ತಂಡ ನಡೆಸಿಕೊಟ್ಟರು.
ಸಮಾರೋಪದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಭವಾನಿಶಂಕರ ಕಲ್ಮಡ್ಕ, ತಾಲೂಕು ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಚಂದ್ರನ್ ಕೂಟೇಲು, ಬಾಳಿಲ ಆಶ್ರಮ ಶಾಲೆಯ ಪೋಷಕರ ಸಮಿತಿ ಉಪಾಧ್ಯಕ್ಷ ರಾಗಿ ಆಯ್ಕೆಯಾದ ಚೇತನ್ ಕಲ್ಮಡ್ಕರನ್ನು ಗೌರವಿಸಲಾಯಿತು.
ರೆಂಜಾಳ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ಭಟ್ ವೈದಿಕ ಕಾರ್ಯ ನಿರ್ವಹಿಸಿದರು.