ಶ್ರೀ ಕೃಷ್ಣಾ ಭಜನಾ ಮಂದಿರ, ಯುವಕ ಮಂಡಲದ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆ
ಶ್ರೀ ಕೃಷ್ಣಾ ಭಜನಾ ಮಂದಿರ ಗುತ್ತಿಗಾರು ಹಾಗೂ ಯುವಕ ಮಂಡಲ ಗುತ್ತಿಗಾರು ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಆಚರಣೆಯು ಗುತ್ತಿಗಾರಿನ ಶ್ರೀ ಕೃಷ್ಣಾ ಭಜನಾ ಮಂದಿರದ ವಠಾರದಲ್ಲಿ ಆ.26 ರಂದು ನಡೆಯಿತು.
ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಹಿರಿಯ ಭಜಕ ಆನಂದ ಆಚಾರ್ಯ ಬಾಕಿಲ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಯುವಕ ಮಂಡಲ ದ ಅಧ್ಯಕ್ಷ ಲೋಹಿತ್ ಚೈಪೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವ್ಯವಸ್ಥಾಪನ ಸಮಿತಿ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿನ ಮಾಜಿ ಸದಸ್ಯ ಡಿ.ಕೆ. ಜನಾರ್ಧನ, ವಿಮಾ ಪ್ರತಿನಿಧಿ ಕೆ. ಶಂಕರ ಭಟ್ ಉಪಸ್ಥಿತರಿದ್ದರು.
ರವಿಪ್ರಕಾಶ್ ಬಳ್ಳಡ್ಕ ಸ್ವಾಗತಿಸಿ, ಪೂರ್ಣಚಂದ್ರ ಪೈಕ ಧನ್ಯವಾದ ಮಾಡಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮವನ್ನು ನಿರೂಪಿಸಿದರು.
ಮಕ್ಕಳ ಕೃಷ್ಣ ವೇಷ ಸ್ಪರ್ಧೆ, ಪುರುಷರಿಗೆ ಹಾಗೂ ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ ಇನ್ನಿತರ ಸ್ಪರ್ಧೆಗಳು ಜರುಗಿತು.
ಸಂಜೆ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಕೃಷ್ಣಾ ಭಜನಾ ಮಂದಿರದ ಅಧ್ಯಕ್ಷ ರವಿಪ್ರಕಾಶ್ ಬಳ್ಳಡ್ಕ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮಿತ್ರ ಮೂಕಮಲೆ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ ಬೊಮ್ಮದೇರೆ ಪೈಕ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ರಮೇಶ್ ಮೆಟ್ಟಿನಡ್ಕ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಹಿರಿಯ ಭಜಕ ಪರಮೇಶ್ವರ ಗೌಡ ಪೈಕ, ಚಂದ್ರಶೇಖರ ಕಂದಡ್ಕ, ಯೋಗ ಶಿಕ್ಷಕ ಶರತ್ ಮರ್ಗಿಲಡ್ಕ ಉಪಸ್ಥಿತರಿದ್ದರು.ಸಮಾರಂಭದಲ್ಲಿ
ವಿಶ್ವ ದಾಖಲೆ ಬರೆದ ಯೋಗ ಪಟುಗಳಾದ ಗೌರಿತ ಕೆ. ಜಿ, ನಿಹಾನಿ ವಾಲ್ತಾಜೆ ಮತ್ತು ದಿಶಾ ಕೊರಂಬಡ್ಕ ಇವರನ್ನು ಸನ್ಮಾನಿಸಲಾಯಿತು.
ಜಗದೀಶ್ ಪೈಕ ಸ್ವಾಗತಿಸಿ, ಪೂರ್ಣಚಂದ್ರ ಪೈಕ ಧನ್ಯವಾದ ಮಾಡಿದರು. ಕಿಶೋರ್ ಕುಮಾರ್ ಪೈಕ ಕಾರ್ಯಕ್ರಮವನ್ನು ನಿರೂಪಿಸಿದರು. ಸಂಜೆಯಿಂದ ಭಜನಾ ಕಾರ್ಯಕ್ರಮ ಜರುಗಿತು.