ಪುತ್ತೂರಿನಲ್ಲಿ ಆ. 25 ರಂದು ವಿಶ್ವ ಹಿಂದೂ ಪರಿಷತ್ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯು 1೦ ರಿಂದ 16 ವರ್ಷದ ಮಕ್ಕಳಿಗೆ ಏರ್ಪಡಿಸಿದ ಜಿಲ್ಲಾಮಟ್ಟದ ರಾಧಾ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಐದನೇ ತರಗತಿಯ ಮನಸ್ವಿ. ಡಿ ಮತ್ತು ಅನರ್ಘ್ಯ ಬಿ.ಎಸ್ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.
ಇವರಿಗೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ.ವಿ, ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ, ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಉಪ ಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ, ಎಲ್ಲಾ ಶಿಕ್ಷಕ ಮತ್ತು ಶಿಕ್ಷಕೇತರವೃಂದದವರು ಅಭಿನಂದಿಸಿದರು.
ಮನಸ್ವಿ ಡಿ ಅವರು ಕೆವಿಜಿ ಪಾಲಿಟೆಕ್ನಿಕ್ ನ ಉದ್ಯೋಗಿ ದಯಾನಂದ ಮತ್ತು ಕೆವಿಜಿ ಐಪಿಎಸ್ ನ ಶಿಕ್ಷಕಿ ಭವ್ಯ ಅಟ್ಲೂರು ಅವರ ಪುತ್ರಿಯಾಗಿರುತ್ತಾರೆ. ಅನರ್ಘ್ಯ ಬಿ.ಎಸ್ ಕೆವಿಜಿ ಪಾಲಿಟೆಕ್ನಿಕ್ ನ ಉದ್ಯೋಗಿ ಬಾಲಸುಬ್ರಮಣ್ಯ ಮತ್ತು ವಿನೋದ ಅವರ ಪುತ್ರಿಯಾಗಿರುತ್ತಾರೆ.