ಆ. 31: ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ವಿ.ಎಸ್ ಕುಂಚಡ್ಕ ನಿವೃತ್ತಿ

0

ಆಲೆಟ್ಟಿ ಗ್ರಾಮದ ಕುಂಚಡ್ಕ ಮನೆತನದ ಹಿರಿಯರಾದ ನಿವೃತ್ತ ಮುಖ್ಯ ಶಿಕ್ಷಕ ಕೊರಗಪ್ಪ ಮಾಸ್ತರ್ ರವರ ಪತ್ನಿ ಮುಖ್ಯ ಶಿಕ್ಷಕಿ ಶ್ರೀಮತಿ ವಿಶಾಲಾಕ್ಷಿ ವಿ.ಎಸ್ ರವರು ಆ.31 ರಂದು ಸುದೀರ್ಘ 30 ವರ್ಷಗಳ ವೃತ್ತಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಇವರು ವಾಲ್ತಾಜೆ ಸೀತಾರಾಮ ಗೌಡ ಮತ್ತು ಶ್ರೀಮತಿ ಗಿರಿಜಾ ವಾಲ್ತಾಜೆ ದಂಪತಿಯ ಪುತ್ರಿ. ತನ್ನ ಪ್ರಾಥಮಿಕ ವಿದ್ಯಾಭ್ಯಾಸ ವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ವಾಲ್ತಾಜೆ ಹಾಗೂ ಮಂಡೆಕೋಲು ಸರಕಾರಿ ಶಾಲೆಯಲ್ಲಿ ಪೂರೈಸಿ, ಪ್ರೌಢಶಿಕ್ಷಣವನ್ನು ಸರಕಾರಿ ಪ್ರೌಢಶಾಲೆಅಜ್ಜಾವರದಲ್ಲಿ ಹಾಗೂಸರಸ್ವತಿ ಶಿಕ್ಷಕರ ತರಬೇತಿ ಕೇಂದ್ರ ಮಡಿಕೇರಿಯಲ್ಲಿ ವೃತ್ತಿ ಸೇವೆಗೆ ಸೇರ್ಪಡೆ ಗೊಂಡಿರುತ್ತಾರೆ.

ಬಳಿಕ 1994 ರಿಂದ 1998 ರವರೆಗೆ ಸ. ಹಿ. ಪ್ರಾ. ಶಾಲೆ ಕಲ್ಮಕಾರಿನಲ್ಲಿ ಹಾಗೂ 1998 ರಿಂದ 2003 ರವರೆಗೆ ಸ .ಹಿ .ಪ್ರಾ. ಶಾಲೆ ಮುಳ್ಯ ಅಟ್ಲೂರು, 2003 ರಿಂದ 2011 ರವರೆಗೆ ಆಲೆಟ್ಟಿ ಗ್ರಾಮದ ನಾಗಪಟ್ಟಣ ಸ. ಕಿ .ಪ್ರಾ ಶಾಲೆಯಲ್ಲಿ ಸೇವೆ.2011 ರಿಂದ 2015 ರವರೆಗೆ ಸ. ಉ .ಹಿ. ಪ್ರಾ. ಶಾಲೆ ಕೋಲ್ಚಾರಿನಲ್ಲಿ, 2015 ರಿಂದ 2024ರವರೆಗೆ ಸ. ಕಿ .ಪ್ರಾ .ಶಾಲೆ ಪೈಂಬೆಚ್ಚಾಲಿನಲ್ಲಿ ಮುಖ್ಯ ಶಿಕ್ಷಕರಾಗಿ ವೃತ್ತಿ ಸೇವೆ ಸಲ್ಲಿಸುತ್ತಿದ್ದು ತನ್ನ ಸುದೀರ್ಘ 30 ವರ್ಷಗಳ ವೃತ್ತಿ ಸೇವೆಯಿಂದ ಆ.31 ರಂದುನಿವೃತ್ತಿಯಾಗಲಿದ್ದಾರೆ. ಇವರು ಪ್ರಸ್ತುತ ಆಲೆಟ್ಟಿ ಗ್ರಾಮದ ಬಾರ್ಪಣೆ ಎಂಬಲ್ಲಿ ಪತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದಾರೆ.