ಸುಳ್ಯ ತಾಲೂಕಿನಾದ್ಯಂತ ಸ್ಯಾಟಲೈಟ್ ಮ್ಯಾಪಿಗೂ ಭೂ ಸ್ಥಿತಿಗೂ ಹಲವಾರು ಮೀಟರ್ ಗಳ ವ್ಯತ್ಯಾಸಗಳು ಕಂಡು ಬಂದಿದ್ದು, ರೈತರಿಗೆ ಸ್ವತಹ ತಮ್ಮ ಕೃಷಿ ಭೂಮಿಯಲ್ಲಿ ಬೆಲೆ ಸಮೀಕ್ಷೆ ನಡೆಸಲು ತುಂಬಾ ಅನಾನುಕೂಲ ಆಗಿರುತ್ತದೆ.
ಅಲ್ಲದೆ ಸ್ವತಃ ಬೆಲೆ ಸಮೀಕ್ಷೆ ನಡೆಸಲು ಅವಧಿಯು ಬಹಳ ಕಡಿಮೆ ಇರುವುದರಿಂದ ಅವಧಿಯನ್ನು ಕೂಡ ವಿಸ್ತರಿಸಿ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ನಿವಾರಿಸಿಕೊಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಸುಳ್ಯ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಆ. 27ರಂದು ಮನವಿ ಸಲ್ಲಿಸಲಾಯಿತು. ಜಿಲ್ಲಾಧಿಕಾರಿಗಳ ಪರವಾಗಿ ಅಪರ ಜಿಲ್ಲಾಧಿಕಾರಿ ಡಾ. ಜಿ ಸಂತೋಷ್ ಕುಮಾರ್ ರೈತ ಸಂಘದ ಜತೆ ಕಾರ್ಯದರ್ಶಿ ಮಂಜುನಾಥ ಮಡ್ತಿಲರವರಿಂದ ಮನವಿ ಸ್ವೀಕರಿಸಿದರು