ಸುಳ್ಯ : ವಾಹಿನಿ ಸಾಹಿತ್ಯ ಸೌರಭ 2024 ಕಾರ್ಯಕ್ರಮ

0

ವಾಹಿನಿ ಕಲಾಸಂಘ ದರ್ಬೆ ಹಾಗೂ
ವಾಹಿನಿ ಕಲಾಸಂಘದ ಸುಳ್ಯ ಘಟಕ ವತಿಯಿಂದ
ವಾಹಿನಿ ಸಾಹಿತ್ಯ ಸೌರಭ 2024 ಹಾಗೂ
ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ, ಕವಿಗೋಷ್ಠಿಯು ಆ.25ರಂದು ಬ್ರಾಹ್ಮಣರ ಸಂಘ ಸಭಾಭವನ , ಸುಳ್ಯ ಇಲ್ಲಿ ನಡೆಯಿತು.

ಸಭಾ ಕಾರ್ಯಕ್ರಮವು ಶ್ರೀಮತಿ ಶ್ರುತಿ ಚೇತನ್ ಅವರ ಸುಶ್ರಾವ್ಯ ಗಣಪತಿ ಸ್ತುತಿಯೊಂದಿಗೆ ಪ್ರಾರಂಭಗೊಂಡಿತು.

ಗೋಪಾಲಕೃಷ್ಣ ಭಟ್ಟ ಮನವಳಿಕೆ ಅಧ್ಯಕ್ಷರು ವಾಹಿನಿ ಕಲಾ ಸಂಘ ಸುಳ್ಯ ಘಟಕ ಅವರು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿ ಅಭ್ಯಾಗತರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಶ್ರೀಮತಿ ಸಾನು ಉಬರಡ್ಕ ಸಾಹಿತಿಗಳು ಮುಖ್ಯಶಿಕ್ಷಕರು ರವರ ನಾಲ್ಕನೆಯ ಕೃತಿ ನೀಳವೇಣಿ ನೀನಾಟ್ಯವಾಡು ಈ ಸಂದರ್ಭದಲ್ಲಿ
ಲೋಕಾರ್ಪಣೆ ಗೊಂಡಿತು.

ಕೃತಿಯ ಬಿಡುಗಡೆ ಹಾಗು ಕೃತಿ ಪರಿಚಯವನ್ನು
ಮಧುರಕಾನನ ಗಣಪತಿಭಟ್ಟ ಸಾಹಿತಿಗಳು ರಾಜ್ಯಾಧ್ಯಕ್ಷರು ವಾಹಿನಿ ಕಲಾ ಸಂಘ ದರ್ಭೆ ಪುತ್ತೂರು ಇವರು ನಡೆಸಿಕೊಟ್ಟರು.

ದೀಪ ಪ್ರಜ್ವಾಲನೆಯೊಂದಿಗೆ ಶ್ರೀಮತಿ ಶಂಕರಿ ಶರ್ಮಾ ಪುತ್ತೂರು ಸಾಹಿತಿಗಳು ಇವರು ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಪ್ರೊ ವಿ ಬಿ ಅರ್ತಿಕಜೆ ಹಿರಿಯ ಸಾಹಿತಿ ನಿವೃತ್ತ ಪ್ರೊಫೆಸರ್ ಅವರ ಅಧ್ಯಕ್ಷತೆಯಲ್ಲಿ ನಡೆದ ವಾಹಿನಿ ಸಾಹಿತ್ಯ ಸೌರಭದಲ್ಲಿಅತಿಥಿ ಆಭ್ಯಾಗತರಾಗಿ ಚಂದ್ರಶೇಖರ ಪೇರಾಲು ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ವೈಲೇಶ್ ಪಿ ಎಸ್, ಕೊಡಗು ಸಾಹಿತಿಗಳು
ಉದಯರವಿ ಕೋಂಬ್ರಾಜೆ , ಖ್ಯಾತ ವಕೀಲರು ಪುತ್ತೂರು, ಅಧ್ಯಕ್ಷರು ವಾಹಿನಿ ಕಲಾಸಂಘ ಪುತ್ತೂರು ಘಟಕ
ವಿಶ್ವನಾಥ ಕುಲಾಲ್, ಸಾಹಿತಿಗಳು ಪುತ್ತೂರು, ವಾಹಿನಿ ಕಲಾಸಂಘ ಬಂಟ್ವಾಳ ಘಟಕ ಕಾರ್ಯದರ್ಶಿಗಳು
ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ, ಸಾಹಿತಿಗಳು, ಕಾಸರಗೋಡು ಇವರು ಉಪಸ್ಥಿತರಿದ್ದು, ಶುಭಹಾರೈಸಿದರು.

ಇದೇ ಸಂದರ್ಭದಲ್ಲಿ ಸಾಧಕರಾದ ಮುರಳೀಕೃಷ್ಣ ಪೆರಡಂಜಿ ಮಾಲಿಕರು ಸ್ಕಂದ ಪ್ಲಾಸ್ಟಿಕ್ ಕೋಟೂರು(ಸ್ವೋದ್ಯೋಗ ಉದ್ಯಮ ಕ್ಷೇತ್ರ)ಡಾ ಶಿವಕುಮಾರ್ ಅಡ್ಕ,ಕಾರ್ತಿಕ್ ಕ್ಲಿನಿಕ್ ಮುಳ್ಳೇರಿಯ (ವೈದ್ಯಕೀಯ, ಆಯುರ್ವೇದ ಔಷಧಿ ತಯಾರಿಕೆ ,ಯಕ್ಷಗಾನ ಕಲಾವಿದರು ಕವಿ), ಈಶ್ವರ ಕುಮಾರ್ ಉಬರಡ್ಕ. ಉದ್ಯಮಿಗಳು ಪಂಚವಲ್ಲಿ ತೈಲ ಆಯುರ್ವೇದ ಔಷಧಿ ತಯಾರಿಕೆ ಹಾಗೂ ಮಾರಾಟ ಇವರನ್ನು ಸನ್ಮಾನಿಸಲಾಯಿತು.

ಡಾ. ಶಿವಕುಮಾರ್ ಅಡ್ಕ ಹಾಗೂ ಮುರಳೀಕೃಷ್ಣರವರು ಸನ್ಮಾನಿತರ ಕುರಿತು ಮಾತನಾಡಿದರು.

ಅಶ್ವಥ್ ಬರಿಮಾರು ಧನ್ಯವಾದ ನೆರವೇರಿಸಿದರು.

ಕವಿಗೋಷ್ಟಿಯು ಶ್ರೀಮತಿ ಅನುರಾಧ ಶಿವಪ್ರಕಾಶ್, ಉಬರಡ್ಕ ,
ಯುವ ಕವಯತ್ರಿ, ಸುಳ್ಯ ಇವರ ಅಧ್ಯಕ್ಷತೆಯಲ್ಲಿ,
ಶ್ರೀಮತಿ ಭಾರತಿ ಕೊಲ್ಲರಮಜಲು, ಹಿರಿಯ ಕವಯತ್ರಿ , ಪುತ್ತೂರು ಇವರು ಚಾಲನೆಯೊಂದಿಗೆ ಪ್ರಾರಂಭಗೊಂಡಿತು.

ಶುಭಾಶಂಸನೆಯನ್ನು ನರಸಿಂಹ ಭಟ್ಟ ಕಟ್ಟದಮೂಲೆ, ಹಿರಿಯ ಕವಿಗಳು ನಡೆಸಿಕೊಟ್ಟರು.
ಉದಯರವಿ ಕೋಂಬ್ರಾಜೆ, ಅಶೋಕ್ ಎನ್ ಕಡೇಶಿವಾಲಯ,
ಗೋಪಾಲಕೃಷ್ಣ ಭಟ್ಟ ಮನವಳಿಕೆಯವರ ಉಪಸ್ಥಿತಿಯಲ್ಲಿನಡೆದ ಕವಿಗೋಷ್ಟಿಯಲ್ಲಿ ಈ ಕೆಳಗಿನ ಕವಿಗಳು ತಮ್ಮ ಕವನವನ್ನು ವಾಚಿಸಿ ಪ್ರಮಾಣಪತ್ರವನ್ನು ಪಡೆದುಕೊಂಡರು.

ಶ್ರೀಮತಿ ಸುಮಂಗಲಾ ಕೃಷ್ಣ ಗುತ್ತಿನಡ್ಕ, ಅಶ್ವತ್ಥ್ ಬರಿಮಾರು,ಶ್ರೀಮತಿ ರಶ್ಮಿತಾ ಸುರೇಶ್, ವಿಶ್ವನಾಥ್ ಕುಲಾಲ್
ಶ್ರೀಮತಿ ವಿದ್ಯಾಶಂಕರಿ,ವಿಜಯಕುಮಾರ ಕಾಣಿಚ್ಚಾರ್, ಶ್ರೀಮತಿ ಶಂಕರಿ ಶರ್ಮಾ ಪುತ್ತೂರು , ಶ್ರೀಮತಿ ರತ್ನ ಕೆ ಭಟ್, ತಲಂಜೇರಿ, ವೈಲೇಶ್ ಪಿ ಎಸ್ ಕೊಡಗು , ಶ್ರೀಮತಿ ಸಂಧ್ಯಾ ಕುಮಾರ್ ಉಬರಡ್ಕ , ಶ್ರೀಮತಿ ಪ್ರಮೀಳಾ ರಾಜ್, ಶ್ರೀಮತಿ ಪ್ರಮೀಳಾ ಚುಳ್ಳಿಕ್ಕಾನ, ಶ್ರೀಮತಿ ಶ್ರೀಲತಾ ಪದ್ಯಾಣ , ಡಾ
ಶಿವಕುಮಾರ್ ಅಡ್ಕ , ಶ್ರೀಮತಿ ಆಶಾ ಮಯ್ಯ, ಶ್ರೀಮತಿ ಸುಮಾ ಕಿರಣ್ , ಶ್ರೀಮತಿಗಾಯತ್ರಿ ಪಳ್ಳತ್ತಡ್ಕ, ಶ್ರೀಮತಿ ವರಲಕ್ಷ್ಮೀ ಪರ್ತಜೆ, ಪ್ರೊ ವಿ ಬಿ ಅರ್ತಿಕಜೆ
ಶ್ರೀ ಮಧುರಕಾನನ ಗಣಪತಿ ಭಟ್ಟ ವಾಚಿಸಿದರು.

ಕವಿಗೋಷ್ಠಿ ಸ್ವಾಗತವನ್ನು ಶ್ರೀಮತಿ ಪ್ರಮೀಳಾರಾಜ್ ಸುಳ್ಯ ನಡೆಸಿಕೊಟ್ಟರು ಧನ್ಯವಾದವನ್ನು ಶ್ರೀಮತಿ ಶ್ರೀಲತಾ ಪದ್ಯಾಣ ನೆರವೇರಿಸಿದರು .

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಆಶಾ ಮಯ್ಯ, ಕುಂಜೂರು ಪಂಜ ಹಾಗು ಶ್ರೀಮತಿ ಸುಮಾ ಕಿರಣ್, ಮಣಿಪಾಲ ಅವರು ನಡೆಸಿಕೊಟ್ಟರು.

ಈಶ್ವರ ಕುಮಾರ್ ಉಬರಡ್ಕ ಹಾಗೂ ಶ್ರೀಮತಿ ಸಂಧ್ಯಾ ಕುಮಾರ್ ಉಬರಡ್ಕ ದಂಪತಿಗಳು ಸರ್ವರಿಗೂ ಉಪಾಹಾರ ಊಟೋಪಚಾರ ನೀಡಿ ಸತ್ಕರಿಸಿದರು