ಐದು ದಿನದಲ್ಲಿ ಮೂರು ಸಾಕು ನಾಯಿಗಳು ನಾಪತ್ತೆ

0

ಪಂಜ ಸಮೀಪದ ಪೊಳೆಂಜ ಕಂರ್ಬು ನೆಕ್ಕಿಲದಲ್ಲಿ ನಡೆದ ಘಟನೆ

ಚಿರತೆ ದಾಳಿಯ ಶಂಕೆ -ಹೆಜ್ಜೆ ಗುರುತು ಪತ್ತೆ

ಪಂಜ ಸಮೀಪದ ಪೊಳೆಂಜ ಕಂರ್ಬುನೆಕ್ಕಿಲ ಎಂಬಲ್ಲಿ ಐದು ದಿನಗಳಲ್ಲಿ ವಿದೇಶಿ ತಳಿಯ ಮೂರು ಸಾಕು ನಾಯಿಗಳು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದ್ದು ,ಜನರಲ್ಲಿ ಭಯ ಹುಟ್ಟಿಸಿದೆ.

ಪಂಜದ ಕಂರ್ಬು ನೆಕ್ಕಿಲ ರಾಮಚಂದ್ರ ಭಟ್ ಎಂಬವರ ಎರಡೂ ನಾಯಿಗಳು ಆ.೨೮ ರಂದು ರಾತ್ರಿ ಒಟ್ಟಿಗೆ ನಾಪತ್ತೆಯಾಗಿದ್ದು, ಐದು ದಿನಗಳಲ್ಲಿ ಹಿಂದೆಯಷ್ಟೇ ರಾತ್ರಿ ಕಂರ್ಬು ನೆಕ್ಕಿಲ ಧನಂಜಯ ಗೌಡ ಎಂಬವರ ಒಂದು ನಾಯಿ ನಾಪತ್ತೆಯಾಗಿದೆ. ಇವರ ಮನೆ ಸಿಟೌಟ್ ನಲ್ಲಿ ಹೊರಳಾಡಿದ ಕುರುಹು ಇತ್ತು.ಮನೆಯ ಪಕ್ಕ ತೋಟದಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ.

ಆ.೨೯ ರಂದು ಸಂಜೆ ಸ್ಥಳಕ್ಕೆ ಪಂಜ ಅರಣ್ಯ ಇಲಾಖೆಯವರು ಭೇಟಿ ನೀಡಿ ತನಿಖೆಗೆ ನಡೆಸಿದ್ದಾರೆ. ಎರಡು ನಾಯಿಗಳು ವಿದೇಶಿ ತಳಿಯದ್ದು ಆಗಿದ್ದು ಏಕ ಕಾಲದಲ್ಲಿ ನಾಪತ್ತೆಯಾಗಿರುವುದರಿಂದ ಎರಡು ಚಿರತೆ ಇದ್ದಿರ ಬಹುದು ಎಂದು ಜನರಲ್ಲಿ ಸಂಶಯ ಮೂಡಿದೆ. ಪಕ್ಕದ ಪುಳಿಕುಕ್ಕು ಕಾಡಿನಿಂದ ಬಂದಿರಬಹುದು ಎಂದು ಅಂದಾಜಿಸಲಾಗಿದೆ.