ಜಪಾನೀಸ್ ಭಾಷೆ, ಆಚಾರ ವಿಚಾರ, ಅಲ್ಲಿಯ ಲಿಪಿ ಮತ್ತು ಋತುಗಳ ಬಗ್ಗೆ ತಿಳಿಯೋಣ : ಶ್ರೀಮತಿ ಚರಿತಾ ಮಧುಕರ್
ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಕೆವಿಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆ. 30 ರಂದು ಜಪಾನೀಸ್ ಭಾಷಾ ಕಾರ್ಯಗಾರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಶಾಲಾ ಸಂಚಾಲಕ ಡಾ. ರೇಣುಕಾ ಪ್ರಸಾದ್ ಕೆ ವಿ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು ಜೆ ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆ ಐ. ಐ. ಐ. ಟಿ ಜಬಲ್ ಪುರದ ಜಪಾನೀಸ್ ಭಾಷೆಯ ಸಲಹೆಗಾರರು ಮತ್ತು ತರಬೇತುದಾರರಾದ ಶ್ರೀಮತಿ ಚರಿತ ಮಧುಕರ್ ರವರು ಆಗಮಿಸಿ ವಿದ್ಯಾರ್ಥಿಗಳಿಗೆ ಜಪಾನಿ ಭಾಷಾಜ್ಞಾನ,ಅಲ್ಲಿರುವ ಆಚಾರ ವಿಚಾರ ಮತ್ತು ಅಲ್ಲಿಯ ಲಿಪಿಗಳ ಬಗ್ಗೆ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಪ್ರಾಂಶುಪಾಲ ಅರುಣ್ ಕುಮಾರ್, ಶಾಲಾ ಶೈಕ್ಷಣಿಕ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಉತ್ತಪ್ಪ, ಶಿಕ್ಷಕ ವೃಂದದವರು ಮತ್ತು 8,9, 10ನೇ ತರಗತಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.