ಸೆ.7 ರಂದು ಜಟ್ಟಿಪಳ್ಳದಲ್ಲಿ 31ನೇ ವರ್ಷದ ಗಣೇಶೋತ್ಸವ

0


ಶ್ರೀರಾಮ ಭಜನಾ ಸೇವಾ ಸಂಘ ಜಟ್ಟಿಪಳ್ಳ ಇದರ ಆಶ್ರಯದಲ್ಲಿ 31ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮ ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತಕಟ್ಟೆಯಲ್ಲಿ ಸೆ.7 ರಂದು ನಡೆಯಲಿದೆ.


ಬೆಳಿಗ್ಗೆ ಗಣಪತಿ ಹವನ ನಂತರ ನೂತನ ಬೆಳ್ಳಿ ಕಿರೀಟಕ್ಕೆ ಶುದ್ದಿಕಲಶ,ಬೆಳಿಗ್ಗೆ10 ಗಂಟೆಗೆ ಗಣಪತಿ ಮೂರ್ತಿ ಪ್ರತಿಷ್ಠಾಪನೆ,11 ಗಂಟೆಗೆ ಸ್ಥಳೀಯ ಮಹಿಳೆಯರಿಂದ ಭಜನಾ ಕಾರ್ಯಕ್ರಮ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ, 1 ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ ,3 ಗಂಟೆಗೆ ಮಹಾಮಂಗಳಾರತಿ 3.30ಕ್ಕೆ ವೈಭವದ ಶೋಭಾಯಾತ್ರೆ ಯೊಂದಿಗೆ ಬೊಳಿಯಮಜಲು ಹೊಳೆಯಲ್ಲಿ ಜಲಸ್ಥಂಬನ ನಡೆಯಲಿದೆ