ಪೈಂಬೆಚಾಲು ಎಸ್ ಎಸ್ ಎಫ್ ಶಾಖಾ ವತಿಯಿಂದ ಹಿಜಾಮ ಚಿಕಿತ್ಸೆ ಕ್ಯಾಂಪ್

0

ಪೈಂಬೆಚಾಲು ಎಸ್ ಎಸ್ ಶಾಖಾ ವತಿಯಿಂದ ಹಿಜಾಮಾ ಚಿಕಿತ್ಸೆ ಕ್ಯಾಂಪ್ ಸೆ 1 ರಂದು ಸುನ್ನಿ ಸೆಂಟರ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖೆಯ ಅಧ್ಯಕ್ಷ ಅಬ್ದುಲ್ ನಾಸಿರ್ ಪಿ ಎ ವಹಿಸಿದ್ದರು.
ಕ್ಯಾಂಪ್ ಉದ್ಘಾಟನೆಯನ್ನು ಸ್ಥಳೀಯ ಮಸೀದಿ ಖಥೀಬರಾದ ರಹ್ಮಾನ್ ಸಖಾಫಿ ಉದ್ಘಾಟಿಸಿ ಮಾತನಾಡಿ ಹಿಜಾಮ್ ಚಿಕಿತ್ಸೆ ಪುರಾನ ಕಾಲದಿಂದಲೂ ತುಂಬಾ ಮಹತ್ವವನ್ನು ಪಡೆದಿದೆ.
ಈ ಚಿಕೆತ್ಸೆಯಿಂದ ಮನುಷ್ಯರ ದೇಹದಲ್ಲಿ ಶೇಖರಣೆ ಗೊಂಡಕೆಡುಕು ರಕ್ತವನ್ನು ಹೊರ ತೆಗೆಯುವ ಕಾರ್ಯ ಆಗುತ್ತದೆ. ದೇಹದಲ್ಲಿ ಕೇಡು ರಕ್ತ ಸೇರಿದರೆ ರೋಗಗಳು ಉಲ್ಭಣಗೊಂಡು ಮನುಷ್ಯರು ನಾನಾ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಇದನ್ನು ತಡೆಯುವ ಕೆಲಸ ಹಿಜಾಮ ಚಿಕಿತ್ಸೆ ಮಾಡುತ್ತದೆ ಎಂದರು. ಪೂರ್ವಿಕರು ಈ ಚಿಕಿತ್ಸೆಯನ್ನು ಹೆಚ್ಚಾಗಿ ಪಡೆಯುತಿದ್ದರು ಎಂದು ಮಾಹಿತಿ ನೀಡಿದರು.

ಮದರಸ ಸದರ್ ಮೊಅಲ್ಲಿಮ್ ಇಸ್ಮಾಯಿಲ್ ಸಖಾಫಿ ಪ್ರಾಸ್ತವಿಕ ಮಾತನಾಡಿದರು.

ವೇದಿಕೆಯಲ್ಲಿ ಸ್ಥಳೀಯ ಜಮಾಅತ್ ಕಮಿಟಿ ಅಧ್ಯಕ್ಷ ಟಿಎಂ ಅಬ್ದುಲ್ ಖಾದರ್, ಕರ್ನಾಟಕ ಮುಸ್ಲಿಂ ಜಮಾಅತ್ ಶಾಖಾ ಅಧ್ಯಕ್ಷ ಫಾರೂಕ್ ಮದನಿ,ಎಸ್ ಎಸ್ ಎಫ್ ಸುಳ್ಯ ಡಿವಿಷನ್ ಅಧ್ಯಕ್ಷ ಸಿದ್ದೀಕ್ ಸಖಾಫಿ ಪಿ ಎ, ಅಜ್ಜಾವರ ಶಾಖೆಯ ಅಧ್ಯಕ್ಷ ಶಿಹಾಬ್ ಫಾಲಿಲಿ, ಎಸ್‌ವೈಎಸ್ ಅಧ್ಯಕ್ಷ ಪಿ ಎಂ ಅಬ್ದುಲ್ ರಹಿಮಾನ್, ಹಾಗೂ ಎಂ ವೈ ಎಸ್ ಅಧ್ಯಕ್ಷ ಸಿದ್ದೀಕ್ ಟಿ ಎ ಉಪಸ್ಥಿತರಿದ್ದರು.
ಕ್ಯಾಂಪಿನಲ್ಲಿ ಸ್ಥಳೀಯ ಜಮಾಅತ್ ಸದಸ್ಯರುಗಳು ಭಾಗವಹಿಸಿದ್ದರು.
ನೌಶಾದ್ ಫಾಲಿಲಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.