ಪೈಚಾರ್ :ಅಲ್ ಅಮೀನ್ ಯೂತ್ ಸೆಂಟರ್ ವಾರ್ಷಿಕ ಮಹಾಸಭೆ ಹಾಗೂ ನೂತನ ಸಮಿತಿ ರಚನೆ

0

ಅಲ್ ಅಮೀನ್ ಯೂತ್ ಸೆಂಟರ್ ಪೈಚಾರ್ ಇದರ 17ನೇ ವಾರ್ಷಿಕ ಮಹಾಸಭೆಯು. ಸೆ.1ರಂದು ಖುವ್ವತ್ತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ನಡೆಯಿತು .

ಕಾರ್ಯಕ್ರಮದಲ್ಲಿ ದುಹವನ್ನು.ಅಲ್ ಅಮೀನ್ ಯೂತ್ ಸೆಂಟರ್ ಗೌರವಧ್ಯಕ್ಷರಾದ ಇಬ್ರಾಹಿಂ ಪೈಝಿ ನೆರವೆರೀಸಿದರು. ಕಿರಾಹತನ್ನು ಎ ವೈ ಸಿ ಇದರ ಕಾರ್ಯದರ್ಶಿ ಸಲಾಮ್ ಪೈಚಾರ್ ಓದಿದರು. ಸಭೆಯ ಉದ್ಘಾಟನೆಯನ್ನು ಬದ್ರಿಯ ಜುಮಾ ಮಸೀದಿ ಖತೀಬ್ ಶಮೀರ್ ಅಹ್ಮದ್ ನಹೀಮಿಯವರು ನೆರವೇರಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಎ ವೈ ಸಿ . ಅಧ್ಯಕ್ಷರಾದ ಆಶ್ರಫ್ ಪೈಚಾರ್ ವಹಿಸಿದ್ದರು. ವೇದಿಕೆಯಲ್ಲಿ ಬದ್ರೀಯ ಜುಮಾ ಮಸೀದಿ ಅಧ್ಯಕ್ಷರಾದ ಹಾಜಿ.ಇಬ್ರಾಹಿಮ್ .ಪಿ. ಪ್ರಧಾನ ಕಾರ್ಯದರ್ಶಿ ಹನೀಫ್.ಪಿಕೆ.ಉಪಸ್ಥಿತರಿದ್ದರು.

ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರ ಮಂಡನೆಯನ್ನು.ಎ ವೈ ಸಿ. ಪ್ರಧಾನ ಕಾರ್ಯದರ್ಶಿ ಮುಜೀಬ್ ಪೈಚಾರ್ ಮಂಡಿಸಿದರು.


ಸಭೆಯಲ್ಲಿ ಮುಂದಿನ ದಿನಗಳಲ್ಲಿ ಸಮಿತಿ ವತಿಯಿಂದ ರೂಪಿಸುವ ಕ್ರಿಯಾಯೋಜನೆ. ಹಾಗೂ.ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು.


ಬಳಿಕ ನೂತನ ಸಾಲಿನ ಸಮಿತಿಯನ್ನು ರಚಿಸಿ ಅಧ್ಯಕ್ಷರಾಗಿ ಅಬ್ದುಲ್ ಸತ್ತಾರ್ ಪಿಎ., ಉಪಾಧ್ಯಕ್ಷರಾಗಿ ,ಹನೀಫ್ ಅಲ್ಫಾ, ಪ್ರಧಾನ ಕಾರ್ಯದರ್ಶಿ ಅಬೂಸಾಲಿ ಕೆಪಿ., ಜೊತೆ ಕಾರ್ಯದರ್ಶಿಗಳಾಗಿರಿಝ್ವಾನ್ ಶಾಂತಿನಗರ, ಮಿದ್ದ್ಲಾಜ್ ಬೆಟ್ಟಂಪಾಡಿ., ಕೋಶಾಧಿಕಾರಿ ಸಲಾಮ್ ಪೈಚಾರ್, ಸಂಘಟನ ಕಾರ್ಯದರ್ಶಿಯಾಗಿ ಉನೈಸ್ ಪೈಚಾರ್, ತಸ್ರಿಫ್ ಸೊಣಂಗೇರಿ ಹಾಗೂ ಮೀಡಿಯಾ ವಿಂಗ್ ಆಫ್ರಿಝ್ ಬೆಟ್ಟಂಪಾಡಿ, ಹಾಗೂ ಪವಾಝ್ ಸೋಣಂಗೇರಿ, ಸದಸ್ಯರುಗಳಾಗಿ ಮುಜೀಬ್ ಪೈಚಾರ್, ಆಶ್ರಫ್ ಪೈಚಾರ್, ಹನೀಫ್ ಪಿಕೆ, ಕರೀಮ್ ಕೆಎಮ್., ಮುನೀರ್ ಜುನೈದ್ ಪೈಚಾರ್, ಪಿಕೆ.ನಾಸಿರ್ ಕೆಎಮ್, ಆನೀಸ್ ಬೆಟ್ಟಂಪಾಡಿ, ಇವರುಗಳನ್ನು ಅಯ್ಕ ಮಾಡಲಾಯಿತು. ಸತ್ತಾರ್ ಪೈಚಾರ್ ಸ್ವಾಗತಿಸಿ. ನಿರೂಪಿಸಿದರು.ಸಭೆಯಲ್ಲಿ ಬದ್ರಿಯ ಜುಮಾ ಮಸೀದಿ ಆಡಳಿತ ಸಮಿತಿಯ ಸದಸ್ಯರುಗಳು ಹಾಗೂ ಜಮಾಹತ್ ನಿವಾಸಿಗಳು ಭಾಗವಹಿಸಿದ್ದರು.