ಬೊಳುಬೈಲು ಪೀಸ್ ಸ್ಕೂಲ್ ನಲ್ಲಿ ಅದ್ದೂರಿಯ ಪ್ರತಿಭಾ ಕಾರಂಜಿ

0

ಕ್ಲಸ್ಟರ್ ಮಟ್ಟದ 12 ಶಾಲೆಗಳಿಂದ 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಬೊಳುಬೈಲು: ಸಮೂಹ ಸಂಪನ್ಮೂಲ ಕೇಂದ್ರ ಸೋಣಂಗೇರಿ ಹಾಗೂ ರಿಸೈಟ್ ಇಸ್ಲಾಮಿಕ್ ಶಾಲೆ ಪೀಸ್ ಸ್ಕೂಲ್ ಬೊಳುಬೈಲು ಇದರ ಸಹಯೋಗದೊಂದಿಗೆ 2024- 25ನೇ ಶೈಕ್ಷಣಿಕ ವರ್ಷದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸೆ 2 ರಂದು ಪೀಸ್ ಶಾಲಾ ಆಡಿಟೋರಿಯಂನಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭವನ್ನು ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಶೀತಲ್ ರವರು ಉದ್ಘಾಟಿಸಿ ಶುಭಾರೈಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ.ಡಿ, ಉಪಾಧ್ಯಕ್ಷೆ ಶ್ರೀಮತಿ ತಿರು ಮಲೆಶ್ವರಿ ಎ.ಎಲ್ ಸದಸ್ಯರಾದ ಮುಜೀಬ್ ಪೈಚಾರ್,ತೌಹೀದ್ ಎಜುಕೇಶನ್ ಆಂಡ್ ಚಾರಿಟೇಬಲ್ ಫೌಂಡೇಶನ್ ( ರಿ )ಬೋಳುಬೈಲು ಇದರ ಅಧ್ಯಕ್ಷರಾದ ಕೆ. ಅಬೂಬಕ್ಕರ್,ಉಪಾಧ್ಯಕ್ಷ ಸಂಶುದ್ದಿನ್,ಶಿಕ್ಷಣ ಸಂಯೋಜಕರಾದ ಶ್ರೀಮತಿ ಧನಲಕ್ಷ್ಮಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶ್ರೀಮತಿ ರಮ್ಯಾ ಹಾಗೂ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನುರಾಧ ಮುಂತಾದವರು ಉಪಸ್ಥಿತರಿದ್ದರು.

ಸೋಣಂಗೇರಿ ವಲಯದ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಅನುರಾಧರವರು ಸ್ಪರ್ಧೆಗಳ ಕುರಿತು ಮಾಹಿತಿಯನ್ನು ನೀಡಿದರು. ರಿಸೈಟ್ ಇಸ್ಲಾಮಿಕ್ ಶಾಲೆಯ ಸಹಶಿಕ್ಷಕಿ ಶ್ರೀಮತಿ ಜಾಹ್ನವಿ ಕಾರ್ಯಕ್ರಮ ನಿರೂಪಿಸಿದರು.ಶಾಲಾ ಮುಖ್ಯೋಪಾಧ್ಯಾಯ ಮೊಹಮ್ಮದ್ ಸೈಫುಲ್ಲ ಸ್ವಾಗತಿಸಿ ಶಿಕ್ಷಕ ಹಸೈನಾರ್ ಸ್ವಲಾಫಿ ವಂದಿಸಿದರು.

ಪ್ರತಿಭಾಕಾರಂಜಿಯಲ್ಲಿ ದೇವರಕಾನ, ಐವರ್ನಾಡು, ಕದಿಕಡ್ಕ, ಸೋಣಂಗೇರಿ, ಜಾಲ್ಸೂರು,ಕನಕ ಮಜಲು ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರ,ರಿಸೈಟ್ ಇಸ್ಲಾಮಿಕ್ ಶಾಲೆ ಬೋಳುಬೈಲು,ಸ.ಕಿ.ಪ್ರಾ ಶಾಲೆ ದೇರಾಜೆ,ಸ. ಕಿ. ಪ್ರಾ ಶಾಲೆ ನಿಡುಬೆ,ಸ.ಕಿ. ಪ್ರಾ ಶಾಲೆ ಬಾಂಜಿಕೋಡಿ,ಸ. ಕಿ. ಪ್ರಾ ಶಾಲೆ ಬೋಳುಬೈಲು, ಸ. ಕಿ ಪ್ರಾ ಶಾಲೆ ಮುಗೇರು ಇಲ್ಲಿನ ಸುಮಾರು 250 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಬೆಳಿಗ್ಗೆಯಿಂದ ಸಂಜೆಯ ವರೆಗೆ ಅದ್ದೂರಿಯಾಗಿ, ಜಿದ್ದಾ ಜಿದ್ದಿನಿಂದ ನಡೆದ ಸ್ಪರ್ಧಾ ಕಾರ್ಯಕ್ರಮದಲ್ಲಿ ಅಂತಿಮವಾಗಿ ಕಿರಿಯರ ವಿಭಾಗದಲ್ಲಿ ಸಮಗ್ರ ಬಹುಮಾನ ಸ.ಹಿ ಪ್ರ ಶಾಲೆ ಐವರ್ನಾಡಿಗೆ ಲಭಿಸಿದರೆ ದ್ವಿತೀಯ ಬಹುಮಾನ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರದ ತೆಕ್ಕೆಗೆ ಸೇರಿತು.

ಹಿರಿಯ ವಿಭಾಗದಲ್ಲಿ ಸಮಗ್ರ ಬಹುಮಾನ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ವಿನೋಬನಗರಕ್ಕೆ ಲಭಿಸಿದರೆ ದ್ವಿತೀಯ ಬಹುಮಾನವು ಜಾಲ್ಸೂರು ಸ.ಹಿ.ಪ್ರಾ ಶಾಲೆಯ ಮಡಿಲಿಗೆ ಲಭಿಸಿತು.

ಪೀಸ್ ಶಾಲಾ ವತಿಯಿಂದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ, ಶಿಕ್ಷಕರುಗಳಿಗೆ ರುಚಿ ರುಚಿಯಾದ ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಶಾಲಾ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕ ವೃಂದದವರು, ಶಾಲಾ ಸಿಬ್ಬಂದಿಗಳು ಸಹಕರಿಸಿದರು.


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅಧಿಕಾರಿಗಳು ಹಾಗೂ ಗಣ್ಯರುಗಳು ವ್ಯವಸ್ಥೆಯ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿ ಆಡಳಿತ ಮಂಡಳಿಯನ್ನು ಶ್ಲಾಘಿಸಿದರು.