ಸುಳ್ಯದಲ್ಲಿ ರೈ ಇಂಡಿಯನ್ ಗ್ಯಾಸ್ ಕಚೇರಿಯ ಸಮಯ ಪಾಲನೆ ಸರಿ ಇಲ್ಲ

0

ಕಚೇರಿ ಮುಂಭಾಗದಲ್ಲಿ ಗ್ರಾಹಕರ ಆಕ್ರೋಶ

ಸುಳ್ಯ ರೈ ಇಂಡಿಯನ್ ಗ್ಯಾಸ್ ಏಜೇನ್ಸಿಯ ಕಚೇರಿ ಯಲ್ಲಿ ಸಮಯ ಪಾಲನೆ ಸರಿ ಇಲ್ಲ ಎಂದು ಸ್ಥಳೀಯ ಗ್ರಾಹಕರು ಕಚೇರಿ ಮುಂಭಾಗ ನಿಂತು ಆಕ್ರೋಶ ವ್ಯಕ್ತ ಪಡಿಸಿದ ಘಟನೆ ಸೆ. 3 ರಂದು ನಡೆದಿದೆ.

ಮಧ್ಯಾಹ್ನ ಬಳಿಕ 2.3೦ ಕ್ಕೆ ತೆರೆಯ ಬೇಕಾದ ಸಂಸ್ಥೆಯ ಬಾಗಿಲು ೩ ಗಂಟೆಯಾದರು ತೆರೆಯದೆ ಇದ್ದುದ್ದರಿಂದ ಗ್ರಾಹಕರಿಗೆ ಸಮಸ್ಯೆ ಆಗುತ್ತಿದೆ. ಅಲ್ಲದೆ ಸಂಸ್ಥೆಯ ಶಟರ್ ಡೋರ್ ಮೇಲೆ ಕಾರ್ಯಕ್ರಮದ ನಿಮಿತ್ತ ಇಂದು ಮಧ್ಯಾಹ್ನ 1 ರಿಂದ 3 ರವರೆಗೆ ಬಂದ್ ಮಾಡಲಾಗಿದೆ ಎಂದು ಚೀಟಿ ಅಂಟಿಸಿದ್ದರು. ನಿನ್ನೆಯೂ ಕೂಡ ಪೂರ್ತಿ ದಿನ ಕಚೇರಿ ಬಂದ್ ಮಾಡಿದ್ದು, ಇದರಿಂದಾಗಿ ದೂರದ ಊರುಗಳಿಂದ ಗ್ಯಾಸ್ ಸಿಲೆಂಡರ್ ವಿಷಯಕ್ಕೆ ಸಂಭಂದಿಸಿ ಬರುವ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ. ಗ್ರಾಹಕರ ಕಾಳಜಿಯೇ ಇಲ್ಲದ ರೀತಿಯಲ್ಲಿ ಇವರು ವರ್ತಿಸುತ್ತಿದ್ದು, ಇದು ಸರಿಯಲ್ಲ ಎಂದು ಸ್ಥಳದಲ್ಲಿದ್ದ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.