ಸುದ್ದಿ ಸಮೂಹ ಸಂಸ್ಥೆ ಹಾಗೂ ಷರಾ ಪ್ರಕಾಶನ ವತಿಯಿಂದ ನಡೆದ ದೇಶ ಭಕ್ತಿ ಗಾಯನ ಸ್ಪರ್ಧೆ

0

ಸುದ್ದಿ ಸಮೂಹ ಸಂಸ್ಥೆಗಳು ಸುಳ್ಯ, ಹಾಗೂ ಡಾ,. ಡಿ. ವಿ ಲೀಲಾಧರ್‌ರವರ ಷರಾ ಪ್ರಕಾಶನ ಸುಳ್ಯ ಇದರ ವತಿಯಿಂದ 78 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸುಳ್ಯ ತಾಲೂಕಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ನಡೆಸಿದ ದೇಶ ಭಕ್ತಿ ಗಾಯನ ಸ್ಪರ್ಧೆ 2024 ಇದರಲ್ಲಿ ಹಿನ್ನಲೆ ಸಂಗೀತ ವಿಭಾಗದಲ್ಲಿ ರೋಟರಿ ಪ್ರೌಢಶಾಲೆ ಹಾಗೂ ರೋಟರಿ ಕಾಲೇಜಿನ ವಿದ್ಯಾರ್ಥಿಗಳು ಬಹುಮಾನ ಪಡೆದಿದ್ದು ಇದರ ವಿತರಣಾ ಕಾರ್ಯಕ್ರಮ ರೋಟರಿ ಕಾಲೇಜಿನ ಸಭಾಂಗಣದಲ್ಲಿ ಸೆ.೪ರಂದು ನಡೆಯಿತು.

ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಯೋಗಿತಾ ಗೋಪಿನಾಥ್ ಬಹುಮಾನ ವಿತರಿಸಿ ಶುಭ ಹಾರೈಸಿದರು. ರೋಟರಿ ಶಾಲಾ ಸಂಚಾಲಕ ಪ್ರಭಾಕರನ್ ನಾಯರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸುದ್ದಿ ಕಛೇರಿ ವ್ಯವಸ್ಥಾಪಕ ಯಶ್ವಿತ್ ಕಾಳಮ್ಮನೆ, ರೋಟರಿ ಕಾಲೇಜು ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ , ರೋಟರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಉಪಸ್ಥಿತರಿದ್ದರು.

ಸುದ್ದಿ ವರದಿಗಾರ ಶರೀಫ್ ಜಟ್ಟಿಪಳ್ಳ ಪ್ರಾಸ್ತವಿಕ ಮಾತನಾಡಿದರು. ಶಿಕ್ಷಕಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು. ಸುದ್ದಿ ಬಳಗದ ಜಯಶ್ರೀ ಹಳೆಗೇಟು , ಅನಿಲ್ ಸಂಪ ಸಹಕರಿಸಿದರು. ಉಪನ್ಯಾಸಕ ವೃಂದ , ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.