ಅತ್ಯುತ್ತಮ ಶಾಲೆ ರಾಜ್ಯ ಪ್ರಶಸ್ತಿಗೆ ಕೋಲ್ಚಾರು ಶಾಲೆ ಆಯ್ಕೆ

0

ಕರ್ನಾಟಕ ಸರ್ಕಾರದ ವತಿಯಿಂದ ೨೦೨೪-೨೫ನೇ ಸಾಲಿನ ಮಾಜಿ ಶಿಕ್ಷಣ ಸಚಿವ ದಿ.ಎಚ್.ಜಿ ಗೋವಿಂದೇ ಗೌಡರ ಹೆಸರಿನಲ್ಲಿ ಬೆಂಗಳೂರಿನಲ್ಲಿ ಶಿಕ್ಷಕರ ದಿನಾಚರಣೆಯ ದಿನ ಕೊಡಮಾಡುವ ಒಂದು ಅತ್ಯುತ್ತಮ ಕನ್ನಡ ಸರಕಾರಿ ಶಾಲೆ ರಾಜ್ಯ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಾಥಮಿಕ ವಿಭಾಗದಲ್ಲಿ ಕೋಲ್ಚಾರ್ ಶಾಲೆ ಆಯ್ಕೆಯಾಗಿದೆ. ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಅಧ್ಯಕ್ಷತೆಯ ಸಮಿತಿಯಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೋಲ್ಚಾರು ಇದರ ಶಿಕ್ಷಣ ಗುಣಮಟ್ಟ, ಪರಿಸರ ಸ್ವಚ್ಛತೆ, ಗ್ರಂಥಾಲಯ, ವಿವಿಧ ಚಟುವಟಿಕೆಗಳ ಆಯೋಜನೆ, ಸಮುದಾಯದ ಸಹಭಾಗಿತ್ವ ಇನ್ನಿತರ ಚಟುವಟಿಕೆಗಳನ್ನು ಪರಿಗಣಿಸಿ ದ.ಕ ಜಿಲ್ಲೆಯಿಂದ ಅತ್ಯುತ್ತಮ ಶಾಲೆ ಎಂದು ಪರಿಗಣಿಸಿ ಆಯ್ಕೆ ಮಾಡಿದೆ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಶೀತಲ್ ಯು.ಕೆ. ಮಾಹಿತಿ ನೀಡಿದ್ದಾರೆ