ದೇಶವನ್ನು ಮುನ್ನಡೆಸಲು ಉತ್ತಮ ಪ್ರಜೆಗಳು ಅಗತ್ಯ. ಪ್ರಜೆಗಳು ದೊರೆಯಬೇಕಿದ್ದರೆ ಅವರಿಗೆ ಉತ್ತಮ ಶಿಕ್ಷಣ ಅಗತ್ಯ. ಅದೇ ಉತ್ತಮ ಶಿಕ್ಷಣ ದೊರೆಯಬೇಕಾದರೆ ಉತ್ತಮ ಶಿಕ್ಷಕರು ಅಗತ್ಯವೆಂಬಂತೆ ಇಲ್ಲಿ ನಾನೊಬ್ಬ ಶಿಕ್ಷಕನಾಗಿ ಹೇಳುವುದಾದರೆ ಇಪ್ಪತ್ತು ಹಿಂದೆ ನಾನು ಶಾಲೆಗೆ ಹೋಗುವ ಸನ್ನಿವೇಶದ ಕೆಲವೊಂದು ತುಣುಕುಗಳು ಗರಿಗೆದರುತ್ತೀವೆ.
ನನ್ನ ಶಾಲಾ ದಿನದಲ್ಲಿ ಕಲಿಕೆಗೆ ಪೂರಕವಾದ ವ್ಯವಸ್ಥೆಯೂ ಇರಲಿಲ್ಲ. ಅಲ್ಲದೆ ನಾನು ಒಂದನೇ ತರಗತಿಯಿಂದ ನಾಲ್ಕನೇ ತರಗತಿವರೆಗೆ ಅಂದು ಸರಿಯಾದ ಮಾರ್ಗದರ್ಶಿ ಶಿಕ್ಷಕರ ಕೊರತೆ ಎದ್ದು ಕಾಣುತಿತ್ತು. ಕುಳಿತುಕೊಳ್ಳಲು ಬೆಂಚು, ಕುರ್ಚಿಯ ಸೌಕರ್ಯವು ಇಲ್ಲದೆ ನೆಲದ ಮೇಲೆ ಕುಳಿತು ಪಾಠ ಹೇಳಿ ಕೊಡುತ್ತಿದ್ದ ಸರ್ ನಮಗಿದ್ದರೂ ಅವರೇ ಸರಳಾಯಾರೂ ಅಜ್ಜಾವರದವರು ಇವರ ಸ್ಕೂಟರ್ ಬರುತ್ತಿದ್ದ ಶಬ್ದ ಕೇಳುತ್ತಿದ್ದಂತೆ ನಾವೆಲ್ಲ ಶಾಲೆಯ ಹೊರಾಂಗಣದಿಂದ ಎದ್ದು ಬಿದ್ದು ತರಗತಿಯ ಒಳಗಡೆ ಹೋಗಿ ಗಪ್ ಚಿಪ್ ಎಂದು ಕುಳಿತುಕೊಳ್ಳುತ್ತಿದ್ದೇವು.
ಆಗ ಮಾತ್ರ ಆಧ್ಯಾಪಕರ ಅಪಾರ ಗೌರವ, ಪ್ರೀತಿ, ಭಯ – ಭಕ್ತಿ, ಎಲ್ಲವೂ ಅಂದಿನ ಮಕ್ಕಳಲ್ಲಿ ತುಂಬಿತ್ತು. ಅಲ್ಲದೆ ಊರಿನಲ್ಲಿ ಅಧ್ಯಾಪಕ ವೃತ್ತಿ ಎಂಬುದಕ್ಕೆ ಹಿಂದೆ ಶ್ರೇಷ್ಠ ವೃತ್ತಿ ಎನ್ನುತ್ತಿದ್ದರು. ಆದರೆ ಇಂದಿನ ಜಾಯಾಮಾನದಲ್ಲಿ ಕೊಂಚ ಅವಲೋಕಿಸುವುದಾದರೆ.?? ಅಧ್ಯಾಪಕರೊಂದಿಗೆ ವಾದಿಸುವ, ಶಿಕ್ಷಕರಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸುವ ವಿದ್ಯಾರ್ಥಿಗಳ ಸಂಖ್ಯೆ ಬಹುಮುಖವಾಗಿದೆ ಇದರಿಂದಾಗಿ ಮಕ್ಕಳಲ್ಲಿ ವಿನಯ, ನಮ್ರತೆ, ಗೌರವ, ಕುಂಠಿತಗೊಳ್ಳುತ್ತಿದೆ.
ಇದರಿಂದಾಗಿ ನಮ್ಮ ಹಿರಿಯರು ಯಾವ ರೀತಿಯಾಗಿ ಶಿಕ್ಷಕರೊಂದಿಗೆ ವ್ಯವಹರಿಸಬೇಕೆಂಬ ಪರಿಪಾಠವನ್ನು ಈ ಕ್ಷಣಕ್ಕೆ ಮರೆತೇ ಬಿಟ್ಟಿರುತ್ತಾರೆ. ಹಾಗಾಗಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ನಡುವಣ ಅಂತರ್ಮುಖಿ ಭಾವನೆಗಳು ಅಸ್ಪಷ್ಟತೆಗೆ ನಿಲುಕದಿರಲಿ ಎಂಬುದು ನನ್ನ ಆಶಯ.