ಸುಶಿಕ್ಷಿತ ಮತ್ತು ಸುದೃಢ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಕೊಡುಗೆ ಅನನ್ಯ. ಪ್ರಗತಿಯುತ್ತ ಸಾಗುತ್ತಿರುವ ದೇಶವನ್ನು ಮುನ್ನಡೆಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್(ರಿ)ಕಮಿಟಿ ಬಿ ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|ಉಜ್ವಲ್ ಯು.ಜೆ. ಹೇಳಿದರು. ಅವರು ಸೆ. ೦೫ ರಂದು ಜಾನಕಿ ವೆಂಕಟ್ರಮಣ ಗೌಡ ಸಭಾಂಗಣದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಇದರ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಮತ್ತು ಗುರುವಂದನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭವನ್ನು ಉದ್ಘಾಟಿಸಿದ ಅಮರಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ|ಯಶೋಧ ರಾಮಚಂದ್ರ ಮಾತನಾಡಿ ಶಿಕ್ಷಕರು ಸಮಾಜದ ಆಸ್ತಿ ಚಂಚಲ ಮನಸ್ಸಿನ ವಿದ್ಯಾರ್ಥಿ ಸಮೂಹಕ್ಕೆ ಏಕಾಗ್ರತೆಯ ಪಾಠ ಮಾಡಿ ಅತ್ಯಂತ ಬಲಿಷ್ಠ ವ್ಯಕ್ತಿಗಳನ್ನಾಗಿ ಮಾಡುವುದರ ಮೂಲಕ ಶಕ್ತಿ ಶಾಲಿ ದೇಶ ಕಟ್ಟುವ ಕಾರ್ಯ ಶಿಕ್ಷಕರಿಂದ ಆಗುತ್ತದೆ. ಆ ಮೂಲಕ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡುವಲ್ಲಿ ಶಿಕ್ಷಕ ಸಮೂಹ ಪ್ರಯತ್ನಿಸುತ್ತಿದೆ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಯ ಆಡಳಿತದಡಿಯಲ್ಲಿ ಬರುವ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಉಪಪ್ರಾಂಶುಪಾಲರು ಆಡಳಿತಾಧಿಕಾರಿಗಳು ಮತ್ತು ಕಛೇರಿ ಅಧೀಕ್ಷಕರನ್ನು ಸನ್ಮಾನಿಸಿದ ಕೆ.ವಿ.ಜಿ.ದಂತ ಮಹಾ ವಿದ್ಯಾಲಯದ ಆಡಳಿತ ಪರಿಷತ್ ಸದಸ್ಯರು, ಮಾಜಿ ನಗರ ಪಂಚಾಯತ್ ಅಧ್ದಕ್ಷರಾದ ಎನ್.ಎ. ರಾಮಚಂದ್ರ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಸಮಾರಂಭದಲ್ಲಿ ಕೆ.ವಿ.ಜಿ ದಂತ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಮನೋಜ್ ಕುಮಾರ್ ಅಡ್ಡಂತಡ್ಕ ಸ್ವಾಗತಿಸಿ, ಕೆ.ವಿ.ಜಿಪಾಲಿಟೆಕ್ನಿಕ್ ಸಿಬ್ಬಂದಿ ಕಮಲಾಕ್ಷ ನಂಗಾರು ವಂದಿಸಿದರು. ಕೆ.ವಿ.ಜಿ.ಐ.ಟಿ.ಐ ಕಛೇರಿ ಅಧೀಕ್ಷಕರಾದ ಭವಾನಿಶಂಕರ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಇದರ ಆಡಳಿತಡಿಯಲ್ಲಿ ಬರುವ ಸಂಸ್ಥೆಗಳ ಎಲ್ಲಾ ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.