ಚೆನ್ನಕೇಶವ ಪರಿಸರದಲ್ಲಿ ಧರ್ಮದ ಅಡಿಯಲ್ಲಿ ಹಲವು ಕಾರ್ಯಕ್ರಮ ಜರುಗುವುದು ಸಂಘಟನೆಯನ್ನು ಬಲಪಡಿಸಲು ಪೂರಕವಾಗಿದೆ : ಕು.ಭಾಗೀರಥಿ ಮುರುಳ್ಯ
ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿಗಾಗಿ 56 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆ.7 ರಿಂದ 11 ರ ತನಕ ನಡೆಯಲಿದ್ದು ಇಂದು ಬೆಳಗ್ಗೆ ಅರ್ಚಕರ ನೇತೃತ್ವದಲ್ಲಿ ಗಣಪತಿ ಹವನವಾಗಿ ಗಣೇಶನ ಮೂರ್ತಿ ಪ್ರತಿಷ್ಠೆ ಮಾಡಲಾಯಿತು.
ಉತ್ಸವದ ಉದ್ಘಾಟನಾ ಸಮಾರಂಭ
ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಶಾಸಕಿ ಕು.ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿದರು.
ಅಕಾಡೆಮಿ
ಆಫ್ ಲಿಬರಲ್
ಎಜುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ರವರು ಭಜನಾ ಪುಸ್ತಕವನ್ನು ಅನಾವರಣ ಗೊಳಿಸಿದರು.
ಅತಿಥಿಗಳಾಗಿ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಹರಪ್ರಸಾದ್ ತುದಿಯಡ್ಕ, ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಿಕ್ರಂ ಎ.ವಿ,ಸಾರ್ವಜನಿಕ ದೇವತಾರಾಧನಾ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ, ಕಾರ್ಯದರ್ಶಿ ಭರತ್ ಪಿ.ಯು, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾ ಮಧುಸೂದನ್, ಕೋಶಾಧಿಕಾರಿ ಶಿವರಾಮ ಕೇರ್ಪಳ ರವರು ವೇದಿಕೆಯಲ್ಲಿ
ಉಪಸ್ಥಿತರಿದ್ದರು.
ಕು.ಯಶಸ್ವಿನಿ ಪ್ರಾರ್ಥಿಸಿದರು. ಕಾರ್ಯದರ್ಶಿ ಭರತ್ ಪಿ.ಯು ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿದರು.
ಶಿವರಾಮ ಕೇರ್ಪಳ ವಂದಿಸಿದರು. ಶ್ರೀಮತಿ ಲತಾಶ್ರೀ ಮೋಂಟಡ್ಕ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಸಮಿತಿ ಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.