ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಖ್ಯಾತಿಯ ಸುದರ್ಶನ ಭಟ್ ಬೆದ್ರಾಡಿಯವರಿಗೆ ಕೂಡಿ ಬಂತು ಕಂಕಣ ಭಾಗ್ಯ

0

ಸಪ್ತಪದಿ ತುಳಿಯಲಿರುವ ಈ ಯುವತಿ ಜ್ಞಾನಗಂಗಾ ಶಾಲೆಯ ಶಿಕ್ಷಕಿ…!

ಹಾಯ್ ಫ್ರೆಂಡ್ಸ್ ನಾನು ಸುದರ್ಶನ ಭಟ್ ಬೆದ್ರಾಡಿ ವೆಲ್ ಕಮ್ ಟು ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಎಂದು ಹೇಳಿ ವಿಧ ವಿಧದ ಸಾಂಪ್ರದಾಯಿಕ ಶೈಲಿಯ ಅಡುಗೆ ಮಾಡಿ ಜನರಿಗೆ ಕಲಿಸುವ ಸುದರ್ಶನ್ ಭಟ್ ರವರಿಗೆ ಇದೀಗ ಕಂಕಣ ಭಾಗ್ಯ ಕೂಡಿಬಂದಿದ್ದು ಆಗಸ್ಟ್ 23ರಂದು ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದೆ.

ಇದೀಗ ಇವರ ಕೈ ಹಿಡಿದಿರುವ ಹುಡುಗಿ ನಮ್ಮೂರಿನ ನೆರೆಯ ತಾಲೂಕು ಕಡಬ ಬೆಳಂದೂರು ಕೈಮಾಣ ಗ್ರಾಮದ ಅಗಳಿ ಶ್ರೀ ಸದಾಶಿವ ದೇವಸ್ಥಾನದ ಅರ್ಚಕರಾದ ಈಶ್ವರಚಂದ್ರ ಭಟ್ ಹಾಗೂ ಶಿಕ್ಷಕಿ ಜ್ಯೋತಿ ದಂಪತಿಯ ಪುತ್ರಿ ಕೃತಿ.

ಸೀತಂಗೋಳಿ ಯ ನಾನಿಲ್ ಪಳ್ಳ ಎಂಬಲ್ಲಿರುವ ವೆಂಕಟ್ರಮಣ ಭಟ್ ಬೆದ್ರಾಡಿ ಹಾಗೂ ಸುಲೋಚನ ದಂಪತಿಯ ಪುತ್ರ ಸುದರ್ಶನ ಭಟ್ ಬೆದ್ರಾಡಿಯವರೊಂದಿಗೆ ಆ.23ರಂದು ಅಗಳಿ ಶ್ರೀ ಸದಾಶಿವ ದೇವಾಲಯಲ್ಲಿ ಇವರ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮ ಹಿರಿಯ ಸಮ್ಮುಖದಲ್ಲಿ ನಡೆಯಿತು.

ಕೃತಿಯವರು ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಕೂಡ ಎಂಗೇಜ್ಮೆಂಟ್ ಫೋಟೋ ಹಂಚಿಕೊಂಡಿದ್ದು, ಇದನ್ನು ನೋಡಿದ ಜನರು ಸುದರ್ಶನ್ ಭಟ್ ಅವರನ್ನು ಕೈ ಹಿಡಿಯಲಿರುವ ಹುಡುಗಿ ಅದೃಷ್ಟ ಮಾಡಿದ್ದಾರೆ ಎನ್ನುತ್ತಿದ್ದಾರೆ.

ಶೀಘ್ರವೇ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ಮುಂದೆ ನಮ್ಮೂರಿನ ಯುವತಿ ಕೃತಿ ಕೂಡ ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್ ಕಾಣಿಸಿಕೊಳ್ಳುವ ನಿರೀಕ್ಷೆಯಲ್ಲಿ ವೀಕ್ಷಕರಿದ್ದಾರೆ.

ವರದಿ: ಪೂಜಾಶ್ರೀ ವಿತೇಶ್ ಕೋಡಿ