ಸೆ.15 : ಐವರ್ನಾಡು ದೇರಾಜೆ ಗೆಳೆಯರ ಬಳಗದ ವತಿಯಿಂದ ಕೆಸರುಗದ್ದೆ ಕ್ರೀಡಾಕೂಟ

0

ಐವರ್ನಾಡು ಗ್ರಾಮದ ಗೆಳೆಯರ ಬಳಗ ದೇರಾಜೆ ವತಿಯಿಂದ ಬೆನ್ನಿದ ನೆಲ ಗೊಬ್ಬುದ ಕಲ 3 ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ಸೆ.15 ರಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದ ಗದ್ದೆಯಲ್ಲಿ ನಡೆಯಲಿದೆ. ಬೆಳಿಗ್ಗೆ ಗಂಟೆ 9.00 ರಿಂದ ಕ್ರೀಡಾಕೂಟ ಪ್ರಾರಂಭಗೊಳ್ಳಲಿದೆ. ಪುರುಷರಿಗೆ ಹ್ಯಾಂಡ್ಬಾ ಲ್, ವಾಲಿಬಾಲ್, ಹಗ್ಗಜಗ್ಗಾಟ, ಬುಗುರಿ ಓಟ ನಡೆಯಲಿದೆ. ಸಾರ್ವಜನಿಕರಿಗೆ ನಿಧಿಶೋಧ ನಡೆಯಲಿದೆ. ಮಹಿಳೆಯರಿಗೆ ಹ್ಯಾಂಡ್ ಬಾಲ್,100 ಮೀ .ಓಟ,ಹಗ್ಗಜಗ್ಗಾಟ, ಬುಗುರಿ ಓಟ ನಡೆಯಲಿದೆ. ಮಕ್ಕಳಿಗೆ 100 ಮೀ ಓಟ ನಡೆಯಲಿದೆ. ಐವರ್ನಾಡು ಗ್ರಾಮಸ್ಥರಿಗೆ ಮಾತ್ರ ಅವಕಾಶ. ಎಲ್ಲಾ ಸ್ಪರ್ಧೆಗಳಿಗೂ ಸ್ಥಳದಲ್ಲಿಯೆ ತಂಡ ರಚಿಸಲಾಗುವುದು. ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸುವವರು ಬೆಳಿಗ್ಗೆ ಗಂಟೆ 9.00ಕ್ಕೆ ಹಾಜರಿರಬೇಕೆಂದು ಸಂಘಟಕರು ತಿಳಿಸಿದ್ದಾರೆ.