ಸುಳ್ಯ ಗಣೇಶೋತ್ಸವ – ಭಕ್ತಿ ರಸ ಮಂಜರಿ ಕಾರ್ಯಕ್ರಮ

0

ಸುಳ್ಯ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ, ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿಗಾಗಿ 56 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಸೆ.8 ರಂದು ಅಪರಾಹ್ನ ಸ್ಥಳೀಯ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.


ಸಂಜೆ ನೇಹಾ ರಕ್ಷಿತ್ ಮಂಗಳೂರು ಮತ್ತು ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ನಡೆಯಿತು.


ಬಳಿಕ ರಾತ್ರಿ ದೇವರಿಗೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಯಿತು.