ಮಾವಿನಕಟ್ಟೆ ಶಾಲೆಯಲ್ಲಿ ಕಳೆದ 23 ವರ್ಷಗಳಿಂದ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಗುತ್ತಿಗಾರು ಪಿಎಂಶ್ರೀ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡ ಪೂರ್ಣಿಮ. ಎ ಅವರಿಗೆ ಬೀಳ್ಕೊಡುಗೆ ಸಮಾರಂಭ ಸೆ. 7 ರಂದು ನಡೆಯಿತು.
ಹಳೆ ವಿದ್ಯಾರ್ಧಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷೆ ಆಶಾ. ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗುತ್ತಿಗಾರು ಕಸ್ಟರ್ ಸಿಆರ್ಪಿ ಕುಶಾಲಪ್ಪ ಗೌಡ, ಶಿಕ್ಷಕಿ ರೂಪವಾಣಿ, ಗ್ರಾ.ಪಂ.ಸದಸ್ಯ ದುರ್ಗಾದಾಸ್ ಮೆತ್ತಡ್ಕ, ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲೋಹಿತ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ 23 ವರ್ಷಗಳಿಂದ ಸಹಶಿಕ್ಷಕಿಯಾಗಿ, ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸಿ ಬೀಳ್ಕೊಡುಗೆಗೊಂಡ ಪೂರ್ಣಿಮ ಅವರನ್ನು ಹಳೆವಿದ್ಯಾರ್ಥಿ ಸಂಘ ಮತ್ತು ಎಸ್ಡಿಎಂಸಿ, ಪೋಷಕರ ವತಿಯಿಂದ ಚಿನ್ನದ ಉಂಗುರ ತೊಡಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಶಿಕ್ಷಕಿ ಪೂರ್ಣಿಮ ಅವರು ಮಾವಿನಕಟ್ಟೆ ಶಾಲೆಗೆ ಸ್ಮಾರ್ಟ್ ಟಿವಿಯನ್ನು ಕೊಡುಗೆಯಾಗಿ ನೀಡಿದರು.
ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ರಾಧಿಕಾ. ಕೆ.ಎಸ್ ಪ್ರಾಸ್ತಾವಿಕ ಮಾತನಾಡಿದರು. ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲೋಹಿತ್ ಸ್ವಾಗತಿಸಿ, ಶಿಕ್ಷಕಿ ಧನ್ಯಶ್ರೀ ವಂದಿಸಿದರು. ಶಿಕ್ಷಕ ದಯಾನಂದ ಎಸ್. ಕಾರ್ಯಕ್ರಮ ನಿರೂಪಿಸಿದರು.