ಎಸ್ ಐ ಸಂತೋಷ್ ಹಾಗೂ ನ ಪಂ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಗುಚ್ಛ ನೀಡಿ ಸ್ವಾಗತ
ಸುಳ್ಯ ತಾಲೂಕು ಬಿ ಎಂ ಎಸ್ ಆಟೋ ರಿಕ್ಷಾ ಚಾಲಕರ ಸಂಘದ ವತಿಯಿಂದ ಸೆ. 10 ರಂದು ಸುಳ್ಯ ಠಾಣಾ ನೂತನ ಎಸ್ ಐ ಹಾಗೂ ಸುಳ್ಯ ನಗರ . ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಭೇಟಿ ಮಾಡಿ ಹೂ ಗುಚ್ಛ ನೀಡಿ ಸ್ವಾಗತಿಸಿದರು.
ಈ ವೇಳೆ ನ ಪಂ ಅಧ್ಯಕ್ಷರ ಬಳಿ ಖಾಸಗಿ ಬಸ್ಸು ನಿಲ್ದಾಣದ ಆಟೋ ನಿಲ್ದಾಣ ಮುಂಭಾಗ ಪ್ರವೇಶ ಜಾಗದಲ್ಲಿ ಅಲ್ಪ ವಿಸ್ತರಣೆ ಮಾಡಿ ಕೊಡಲು ವಿನಂತಿಸಿದರು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ರಾಧಾಕೃಷ್ಣ ಬೈತಡ್ಕ, ಹಾಗೂ ಕಾರ್ಯಧರ್ಶಿ ಚಂದ್ರಶೇಖರ ಮರ್ಕಂಜ ,ಕೋಶಾಧಿಕಾರಿ ನಿತ್ಯಾನಂದ ಅರಂಬೂರು, ಉಪಾಧ್ಯಕ್ಷ ರವಿ ಜಾಲ್ಸೂರು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.