ಸುಳ್ಯದ ಆಯುರ್ವೇದ ಕಾಲೇಜು ಮುಂಭಾಗವಿರುವ ಅಡ್ಕಾರ್ ಆರ್ಕೆಡ್‌ನಲ್ಲಿ ಕಾರ್ಯಚರಿಸುತ್ತಿರುವ ಅಂಜಲಿ ಮೊಂಟೆಸ್ಸರಿ ಸ್ಕೂಲ್‌ನಲ್ಲಿ ಸೆ.೧೪ ರಂದು ಓಣಂ ಹಾಗೂ ಈದ್‌ಮಿಲಾದ್ ಹಬ್ಬವನ್ನು ಆಚರಿಸಲಾಯಿತು. ಶಿಕ್ಷಕರಿಂದ ಹಾಗೂ ಪುಟಾಣಿ ಮಕ್ಕಳಿಂದ ಸುಂದರ ಪೂಕಳಂ ಬಿಡಿಸಲಾಗಿತ್ತು.
ಶಾಲಾ ಸಂಚಾಲಕಿ ಗೀತಾಂಜಲಿ ಟಿ.ಜಿ. ವಿದ್ಯಾರ್ಥಿಗಳಿಗೆ ಓಣಂ ಆಚರಣೆಯ ಕಥೆ ಹಾಗೂ ಈದ್‌ಮಿಲಾದ್ ಹಬ್ಬದ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಶಿಕ್ಷಕರು ಕೇರಳ ಸಾಂಪ್ರಾದಾಯಿಕ ಶೈಲಿಯ ಉಡುಗೆ ತೊಟ್ಟು ಸಂಭ್ರಮಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಓಣಂ ಕಾರ್ಯಕ್ರಮದ ಪ್ರಯುಕ್ತ ಮಹಾಬಲಿ ಹಾಗೂ ವಾಮನ ವೇಷ ಆಕರ್ಷಣೆಯಾಗಿತ್ತು.