ಅ. 20ರಂದು ಮೂಡಬಿದಿರೆಯಲ್ಲಿ ನಡೆಯಲಿರುವ ಗದ್ದಿಗೆ ಕರಾವಳಿ ಮರಾಟಿ ಸಮಾವೇಶ 2024, ಇದರ ಪೂರ್ವಭಾವಿ ಸಭೆ ಸುಳ್ಯ ಮರಾಟಿ ಸಂಘದ ಸಭಾಭವನ ಗಿರಿದರ್ಶಿನಿಯಲ್ಲಿ ಕರಾವಳಿ ಮರಾಟಿ ಸಮಾವೇಶ ಪ್ರಧಾನ ಸಮಿತಿಯ ಗೌರವಾಧ್ಯಕ್ಷ ಡಾ. ಸುಂದರ ನಾಯ್ಕ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಸುಂದರ ನಾಯ್ಕ್ ಸಮಾವೇಶದ ರೂಪುರೇಷೆಯನ್ನು ವಿವರಿಸಿದರು. ಸಮಿತಿಯ ಕಾರ್ಯಾಧ್ಯಕ್ಷ ರಾಮಚಂದ್ರ ಕೆಂಬಾರೆ ಕಾರ್ಯಕ್ರಮದ ಸಂಘಟನೆಯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಜನಾರ್ಧನ ಬಿ. ಕುರುಂಜಿಭಾಗ್, ಸ್ಥಾಪಕಾಧ್ಯಕ್ಷ ಜಿ. ದೇವಪ್ಪ ನಾಯ್ಕ್ ಹೊನ್ನೇಡಿ, ಸ್ಥಾಪಕ ಕಾರ್ಯದರ್ಶಿ ಹಾಗೂ ಧಾರ್ಮಿಕ ಚಿಂತನಾ ಸಮಿತಿ ಅಧ್ಯಕ್ಷ ಗೋಪಾಲ ನಾಯ್ಕ್ ದೊಡ್ಡೇರಿ, ಲ್ಯಾಂಪ್ಸ್ ಸಹಕಾರಿ ಸಂಘದ ಅಧ್ಯಕ್ಷ ಸೀತಾನಂದ ಬೇರ್ಪಡ್ಕ, ಮಾಜಿ ಅಧ್ಯಕ್ಷರುಗಳಾದ ಎ.ಕೆ. ನಾಯ್ಕ್ ಅಮೆಬೈಲು, ನಾರಾಯಣ ನಾಯ್ಕ್ ಬೀರಮಂಗಲ, ಮಹಿಳಾ ವೇದಿಕೆಯ ಅಧ್ಯಕ್ಷೆ ಶ್ರೀಮತಿ ರೇವತಿ ದೊಡ್ಡೇರಿ, ಯುವ ವೇದಿಕೆಯ ಅಧ್ಯಕ್ಷ ಉದಯಕುಮಾರ್ ಮಾಣಿಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಿಕರ ಪರವಾಗಿ ಮಹಿಳಾ ವೇದಿಕೆಯ ನಿಕಟಪೂರ್ವಾಧ್ಯಕ್ಷೆ ಶ್ರೀಮತಿ ಗಿರಿಜಾ ಜನಾರ್ಧನ್, ದಯಾನಂದ ಪತ್ತು ಕುಂಜ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿದ್ದ ಸುಳ್ಯ ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ನಾಯ್ಕ್ ಅಜ್ಜಾವರ ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಈಶ್ವರ ವಾರಣಾಶಿ ವಂದಿಸಿದರು. ವಂದಿಸಿದರು. ಕಾರ್ಯದರ್ಶಿ ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.