ಕರೋಡಿ ಕಾಂಪ್ಲೆಕ್ಸ್ ನಲ್ಲಿ ಆಕರ್ಷ್ ನಾರ್ಕೋಡು ರವರ ಇನ್ಫಿನಿಟಿ ಬಿಲ್ಡ್ ಸೊಲ್ಯೂಷನ್ಸ್ ಶುಭಾರಂಭ

0

ಸುಳ್ಯ ತಾಲೂಕು ಪಂಚಾಯತ್ ಸಂಕೀರ್ಣದ ಎದುರಿನ ಕರೋಡಿ ಕಾಂಪ್ಲೆಕ್ಸ್ ನಲ್ಲಿ ಆಕರ್ಷ್ ನಾರ್ಕೋಡು ರವರ ಇನ್ಫಿನಿಟಿ ಬಿಲ್ಡ್ ಸೊಲ್ಯೂಸನ್ಸ್ ಕಚೇರಿಯು ಸೆ.15 ರಂದು ಶುಭಾರಂಭಗೊಂಡಿತು.

ನಿವೃತ್ತ ಯೋಧ ಜನಾರ್ಧನ ನಾರ್ಕೋಡು ಮತ್ತುಶ್ರೀಮತಿ ಜಯಲಕ್ಷ್ಮಿ ಯವರು ದೀಪ ಪ್ರಜ್ವಲಿಸಿದರು.


ಮುಖ್ಯ ಅತಿಥಿಗಳಾಗಿ ಗೌಡ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಅಚ್ಚುತ ಮಾಸ್ತರ್ ನಾರ್ಕೋಡು, ಎಬ್.ಎಸ್.ವೆಂಕಪ್ಪ ಗೌಡ ನಾರ್ಕೋಡು, ದಾಮೋದರ ಗೌಡ ನಾರ್ಕೋಡು,ಕುಶಾಲಪ್ಪ ಗೌಡ ಕುಂಬಳಚೇರಿ, ಶ್ರೀಮತಿಪುಷ್ಪಾರಾಧಾಕೃಷ್ಣ ಮಾಣಿಬೆಟ್ಟು,ಪುರುಷೋತ್ತಮ ಶಿರಾಜೆ, ಶ್ರೀಮತಿ ಲತಾ ಕುದ್ಪಾಜೆ, ನಂದರಾಜ ಸಂಕೇಶ ಉಪಸ್ಥಿತರಿದ್ದರು.
ಹಿತೈಷಿ ಬಂಧು ಮಿತ್ರರು ಸಹಕರಿಸಿದರು.


ನೂತನ ಕಟ್ಟಡ ನಿರ್ಮಾಣ ಹಾಗೂ ಇಂಟೀರಿಯರ್ ವರ್ಕ್ಸ್ ಕ್ಲಪ್ತ ಸಮಯದಲ್ಲಿ ಮಾಡಿಕೊಡಲಾಗುವುದು. ಯಾವುದೇ ರೀತಿಯ ಕಟ್ಟಡ ಇನ್ನಿತರ ಕೆಲಸಕ್ಕೆ ಕಾರ್ಮಿಕರನ್ನು ಒದಗಿಸಿಕೊಡುವ ವ್ಯವಸ್ಥೆ ಇರುವುದಾಗಿ ಆಕರ್ಷ್ ನಾರ್ಕೋಡು ತಿಳಿಸಿದರು.