ಕೂಸಪ್ಪ ಗೌಡ ಮುತ್ಲಾಜೆ ನಿಧನ

0

ಗುತ್ತಿಗಾರು ಗ್ರಾಮದ ಮುತ್ಲಾಜೆ ಕೂಸಪ್ಪ ಗೌಡರು ಅಲ್ಪಕಾಲದ ಅಸೌಖ್ಯದಿಂದ ಸೆ. 18 ರಂದು ರಾತ್ರಿ ನಿಧನರಾದರು.

ಅವರಿಗೆ 78 ವರ್ಷ ವಯಸ್ಸಾಗಿತ್ತು.

ಪ್ರಗತಿಪರ ಕೃಷಿಕರಾಗಿದ್ದ ಅವರು, ಮೊಗ್ರ ಶ್ರೀ ಕನ್ನಡ ದೇವತೆಯಾನೆ ಪುರುಷ ದೈವಸ್ಥಾನದಲ್ಲಿ ಹಲವಾರು ವರ್ಷಗಳಿಂದ ರುದ್ರಚಾಮುಂಡಿ ದೈವದ
ಪೂಜಾರಿಯಾಗಿ ಸೇವೆ ಸಲ್ಲಿಸಿ ಎರಡು ವರ್ಷದ ಹಿಂದೆ ನಿವೃತ್ತಿಯಾಗಿದ್ದರು.

ಮೃತರು ಪತ್ನಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಶಾರದಾ ಮುತ್ಲಾಜೆ, ಪುತ್ರರಾದ ದಿನೇಶ, ಅಶೋಕ, ಸೂರಜ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.