ಅ.9ರಂದು ನಾಮಪತ್ರ ಸಲ್ಲಿಕೆ ಆರಂಭ
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ 2024-2029 ನೇ ಅವಧಿಯಲ್ಲಿ ತಾಲೂಕು ಹಾಗೂ ಯೋಜನಾ ಶಾಖೆಗಳ ನಿರ್ದೇಶಕರ ಆಯ್ಕೆಗೆ ಅ.28ರಂದು ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಅ.9ರಿಂದ ಅವಕಾಶ ಕಲ್ಪಿಸಲಾಗಿದೆ. ಅ.18ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಅ.19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅಂದೇ ಸಂಜೆ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಅ.21ರಂದು ಉಮೇದುವಾರಿಕೆ ವಾಪಸು ಪಡೆಯಲು ಅವಕಾಶ ನೀಡಲಾಗಿದ್ದು, ಅಂದು ಅಂತಿಮ ಅಭ್ಯರ್ಥಿ ಗಳ ಪಟ್ಟಿ ಪ್ರಕಟಿಸಲಾಗುತ್ತದೆ. ಅ.28ರಂದು ಚುನಾವಣೆಗೆ ದಿನ ನೀಡಲಾಗಿದ್ದು, ಮತದಾನ ಮುಗಿದ ಬಳಿಕ ಎಣಿಕೆ ನಡೆಯುವುದು.
ಚುನಾವಣೆ ಸುಸೂತ್ರವಾಗಿ ನಡೆಸಿ ಕೊಡಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳ ನೇಮಕ ನಡೆಯಲಿದೆ.
ಯಾವ ಇಲಾಖೆಯಿಂದ ಎಷ್ಟು ಮಂದಿ ಸ್ಪರ್ಧಿಸಬಹುದೆಂಬ ಕುರಿತು ವಿವರ ಇನ್ನಷ್ಟೆ ದೊರೆಯಬೇಕಾಗಿದೆ.