ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜು : ಹಿಂದಿ ದಿವಸ್ ಕಾರ್‍ಯಕ್ರಮ

0

ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ ಇಲ್ಲಿ ಹಿಂದಿ ದಿವಸ್ ಕಾರ್‍ಯಕ್ರಮವನ್ನು ಸೆ-೧೭ರಂದು ಕಾಲೇಜಿನ ಸಭಾಂಗಣದಲ್ಲಿ ಆಚರಿಸಲಾಯಿತು. ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಸತೀಶ್ ಕುಮಾರ್ ಕೆ ಆರ್ ವಹಿಸಿದ್ದರು.


ಕಾರ್‍ಯಕ್ರಮದ ಉದ್ಘಾಟನೆಯನ್ನು ಹರಿಬಾಯ್ ದೇವಕರಣ್ ಮಹಾವಿದ್ಯಾಲಯಮ್ ಸೋಲಾಪುರ್, ಮಹಾರಾಷ್ಟ್ರ ಇಲ್ಲಿಯ ಹಿಂದಿ ಉಪನ್ಯಾಸಕರಾದ ಧನ್ಯಕುಮಾರ್ ಜಿನ್ ಪಾಲ್ ಬಿರಾಜ್ ದಾರ್ ನೆರವೇರಿಸಿದರು. ವೇದಿಕೆಯಲ್ಲಿ ಐಕ್ಯೂಎಸಿ ಸಂಚಾಲಕರಾದ ಡಾ ಜಯಶ್ರೀ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಉದಯಶಂಕರ ಹೆಚ್, ಹಿಂದಿ ವಿಭಾಗದ ಮುಖ್ಯಸ್ಥರಾದ ರಾಮಕೃಷ್ಣ ಕೆ ಎಸ್ ಹಿಂದಿ ಸಂಘದ ಅಧ್ಯಕ್ಷೆ ಪಂಚಮಿ ಕಬ್ಬಿನಹಿತ್ಲು, ಕಾರ್‍ಯದರ್ಶಿ ಕಾರ್ತಿಕ್ ಕುಮಾರ್ ಉಪಸ್ಥಿತರಿದ್ದರು.

ಈ ಸಂದರ್ಭ ಹಿಂದಿ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಮತ್ತು ಸ್ನಾತಕೋತ್ತರ ಪದವಿ ಮುಗಿಸಿ ಅದ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ಹಿಂದಿ ಪಾರಿಭಾಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಹಿಂದಿ ದಿವಸದ ಅಂಗವಾಗಿ ನಡೆಸಿದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್‍ಯಕ್ರಮವನ್ನು ಸ್ವಾಗತ ನೃತ್ಯದ ಮೂಲಕ ಆರಂಬಿಸಲಾಯಿತು. ಹಿಂದಿ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಕೆ ಎಸ್ ಪ್ರಸ್ತಾವಣೆಗೈದರು ವಿದ್ಯಾರ್ಥಿ ನಿತೀಶ್ ಕುಮಾರ್ ವಂದಿಸಿದರು. ವಿದ್ಯಾರ್ಥಿ ಚೈತನ್ ಅತಿಥಿಗಳ ಪರಿಚಯ ಮಾಡಿದರು. ಹಿಂದಿ ಅಧ್ಯಾಪಿಕೆ ಸ್ವಾತಿ ಹಾಗೂ ವಿದ್ಯಾರ್ಥಿ ಶ್ರೀಕರ ಬಹುಮಾನಗಳ ಪಟ್ಟಿ ವಾಚಿಸಿದರು. ವಿದ್ಯಾರ್ಥಿನಿ ಪಂಚಮಿ ಕಾರ್‍ಯಕ್ರಮ ನಿರೂಪಿಸಿದರು. ನಂತರ ಸಾಂಸ್ಕೃತಿಕ ಕಾರ್‍ಯಕ್ರಮಗಳು ನಡೆದವು.