50.57 ಲಕ್ಷ ನಿವ್ವಳ ಲಾಭ- 10% ಡಿವಿಡೆಂಡ್ ಘೋಷಣೆ
ಸದಸ್ಯರಿಗೆ ಶೀಘ್ರದಲ್ಲಿ ಡಿಜಿಟಲ್ ಪೇಮೆಂಟ್ ಆಧಾರಿತ ಮೊಬೈಲ್ ಆಪ್ ಬಿಡುಗಡೆ
ಉಡುಪಿ ಜಿಲ್ಲೆಗೆ ಶಾಖೆ ವಿಸ್ತರಿಸುವ ಗುರಿ
ಗ್ರಾಹಕರು, ಸದಸ್ಯರು, ಠೇವಣಿದಾರರ ನಿರಂತರ ಗುಣಮಟ್ಟದ ವ್ಯವಹಾರ ಮತ್ತು
ಪ್ರೋತ್ಸಾಹದ ಕಾರಣದಿಂದ ಪ್ರಣವ ಸೌಹಾರ್ದ ಸಹಕಾರಿಯು ರಾಜ್ಯ ಮಟ್ಟದಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ. ಮುಂಬರುವ ದಶಕದೊಳಗೆ 25 ಶಾಖೆಗಳನ್ನು ಹೊಂದುವುದರೊಂದಿಗೆ
ಬ್ಯಾಂಕ್ ಮಾದರಿಯ ವ್ಯವಹಾರಕ್ಕೆ ಅದ್ಯತೆ ನೀಡುವ ನಿಟ್ಟಿನಲ್ಲಿ ಮುಂದಡಿಯಿಡಲಾಗುತ್ತಿದೆ. ಗಮನಾರ್ಹ
ಸಾಧನೆಯೊಂದಿಗೆ ಬೆಳೆಯುತ್ತಿರುವ ಸಂಸ್ಥೆಗೆ ಸ್ವಂತದ್ದಾದ ಪ್ರಧಾನ ಕಚೇರಿ ನಿರ್ಮಿಸುವ ಬಗ್ಗೆ ಮಂಗಳೂರಿನ ಕುಲಶೇಖರದಲ್ಲಿ ಈಗಾಗಲೇ ಜಾಗ ಖರೀದಿಸಲಾಗುವುದು, ನಮ್ಮ ಎಲ್ಲಾ ಅಡಳಿತ ನಿರ್ದೇಶಕರುಗಳು, ಸದಸ್ಯರ ಸಹಕಾರ, ಹಾರೈಕೆಯಿಂದ ಶೀಘ್ರ ಕಟ್ಟಡ ನಿರ್ಮಾಣ ಕೆಲಸ ಕೈಗೆತ್ತಿಕೊಳ್ಳುವ ಬಗ್ಗೆ ಚಿಂತನೆ ಹೊಂದಲಾಗಿದೆ ಎಂದು ಪ್ರಣವ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಜಿ.ಆರ್.ಪ್ರಸಾದ್ ತಿಳಿಸಿದರು.
ಮಂಗಳೂರು ಪದವಿನಂಗಡಿಯ ಬೆನಕ ಸಭಾಭವನದಲ್ಲಿ ಸೆ. 15 ರಂದು ನಡೆದ ಪ್ರಣವ ಸೌಹಾರ್ದ ಸಹಕಾರಿ
ಸಂಘ ನಿಯಮಿತ ಇದರ 9ನೇ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿ ಮಂಡಿಸಿ
ಅವರು ಮಾತನಾಡಿದರು.
ಯೆಯ್ಯಾಡಿಯಲ್ಲಿ ಪ್ರಧಾನ ಕಚೇರಿ ಹಾಗೂ ವಾಮಂಜೂರು, ಬೆಂಗ್ರೆ,
ಎಡಪದವು, ಪುತ್ತೂರು ಸುಳ್ಯ, ಮೈಸೂರು ಮತ್ತು ಕುಶಾಲನಗರ ಸೇಲದಂತೆ ಒಟ್ಟು 8 ಶಾಖೆಗಳನ್ನು ಹೊಂದಿರುವ ಸಂಸ್ಥೆ ತನ್ನ ಸೇವಾತತ್ಪರತೆ ನಿಯಮ ಬದ್ಧ ಆಡಳಿತದ ಪರಿಣಾಮ ನಿರಂತರ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಮಾತ್ರವಲ್ಲದೆ ಉಡುಪಿ ಜಿಲ್ಲೆಯಲ್ಲೂ ಶಾಖೆ ತೆರೆಯುವ ಕಾರ್ಯಪ್ರಗತಿಯಲ್ಲಿದ್ದು ಗ್ರಾಹಕರ ಅನುಕೂಲಕ್ಕಾಗಿ ಮುಂಬರುವ 3 ತಿಂಗಳೊಳಗೆ ಮೊಬೈಲ್ ಬ್ಯಾಂಕಿಂಗ್ ‘ಅಪ್ ಕಾರ್ಯಗತಗೊಳಿಸುವ ಲಕ್ಷ್ಯ ಹೊಂದಲಾಗಿದೆ ಎಂದು ವಿವರಿಸಿದ ಅವರು, ಪಸ್ತುತ ವರ್ಷ 17 ಕೋಟಿ ರೂಪಾಯಿ ಸಾಲ ವಿತಲಸುವ ಗುರಿಯಿದ್ದು, ಈ ವರ್ಷದ ಆಗಸ್ಟ್ ಒಳಗೆ 8 ಕೋಟಿ ರೂಪಾಯಿ ಸಾಲ
ವಿತರಿಸಲಾಗಿದೆ, ಮಾತ್ರವಲ್ಲದೆ 1 ಕೋಟಿ ರೂಪಾಯಿ ಲಾಭದ ನೀಲ ನಕ್ಷೆ ಹೊಂದಲಾಗಿದೆ ಎಂದರು.
ಕಳೆದ ಅರ್ಥಿಕ ವರ್ಷದಲ್ಲಿ 6000 ಸದಸ್ಯರಿದ್ದು 150 ಲಕ್ಷ ಪಾಲು ಬಂಡವಾಳ ಹಾಗೂ 113 ಲಕ್ಷ ವಿವಿಧ ನಿಧಿ ಹೊಂದಿದ್ದು 2854 ಲಕ್ಷ ಠೇವಣಿ ಹೊಂದಿದ್ದು 2600 ಲಕ್ಷ ಸಾಲ ವಿತರಿಸಾಗಿದ್ದು 50.57 ಲಕ್ಷ ರೂ ನಿವ್ವಳ ಲಾಭ ಹೊಂದಲಾಗಿದೆ. ಸಂಸ್ಥೆಯ ವ್ಯವಹಾರ, ನಮ್ಮ ಸಿಬ್ಬಂದಿಗಳ ಕಾರ್ಯ ವೈಖರಿ ಸಂಸ್ಥೆಗೆ ಜನಪ್ರಿಯತೆ ಒದಗಿಸಿದ ಪರಿಣಾಮ ಸಂಸ್ಥೆ ಲಾಭದಾಯಕವಾಗಿ ಮುಂದುವರೆಯುವುದು ಸಾಧ್ಯವಾಗುತ್ತಿದೆ ಎಂದು ಅವರು ತಿಳಿಸಿದರು.
ಪ್ರಣವ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಯಶಸ್ಸಿನ ಉತ್ತುಂಗಕ್ಕೇರಿಸಲು ಪ್ರಧಾನ
ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯ ಅಧ್ಯಕ್ಷ ಜಿ.ಆರ್ ಪ್ರಸಾದ್ ಅವರನ್ನು ನಿರ್ದೇಶಕರು ಸನ್ಮಾನಿಸಿ ಗೌರವಿಸಿದರು.
ಸಾವಯವ ಕೃಷಿಕ್ಷೇತ್ರದ ಸಾಧಕ, ನಿವೃತ್ತ ಯೋಧ ರಮೇಶ್ ನೂಜಿಪ್ಪಾಡಿ, ಸಮಾಜ ಸೇವೆಗಾಗಿ ಪಚ್ಚನಾಡಿ ವಾರ್ಡ್ ಮಹಾನಗರ ಪಾಲಿಕೆ ಸದಸ್ಯೆ ಸಂಗೀತಾ ಆರ್ ನಾಯಕ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ನಿಯಮಿತವಾಗಿ ಪಿಗ್ಮಿ ಸಂಗ್ರಹದ ಮೂಲಕ
ಸಂಸ್ಥೆಗೆ ಶಕ್ತಿ ತುಂಬುತ್ತಿರುವ ಶ್ವೇತಾ ಕಾಮತ್ ಮತ್ತು ಸಂಸ್ಥೆಯ ನೂತನ ಶಾಖೆಗಳನ್ನು ತೆರೆಯುವಲ್ಲಿ
ಅಮೂಲಾಗ್ರವಾಗಿ ಸಹಕಾರಿ ಸುತ್ತಿರುವ ನಿದೇಶಕರಾದ ಸೋಮಪ್ಪ ನ್ಯಾಕ್, ದಯಾಸಾಗರ ಪೂಂಜಾ
ಅವರುಗಳನ್ನು ಸನ್ಮಾನಿಸಿ ಗೌರವಗಳೊಂದಿಗೆ ಅಭಿನಂದಿಸಲಾಯಿತು
ಸಂಸ್ಥೆಯ ಉಪಾಧ್ಯಕ್ಷ ಪ್ರಶಾಂತ್ ಪೈ ಸ್ವಾಗತಿಸಿದರು. ನಿರ್ದೇಶಕ ಹಾಗೂ ಪಣವ ಟ್ರಸ್ಟ್
ಕೋಶಾಧಿಕಾರಿ ಸೋಮಪ್ಪ ನಾಯ್ಕ ಅವರು ಟ್ರಸ್ಟ್‌ನ ಕಾರ್ಯಕ್ರಮಗಳ ವಿವರ ಹಾಗೂ ಲೆಕ್ಕ ಪತ್ರ
ಮಂಡಿಸಿದರು. ಸುಳ್ಯ ಶಾಖೆಯ ವ್ಯವಸ್ಥಾಪಕ ರಂಜಿತ್ ಅಡ್ತಲೆ ಸಹಾಯಧನ ಪಡೆಯುವ ವ್ಯಕ್ತಿಯ ವಿವರ ಒದಗಿಸಿದರು. ಉಪಾಧ್ಯಕ್ಷ ಪ್ರಶಾಂತ್ ಪೈ, ನಿರ್ದೇಶಕ ರವಿಶಂಕರ್ ಮತ್ತು ವೃತ್ತಿಪರ ನಿರ್ದೇಶಕ ಕೃಷ್ಣ ಕಾಮತ್ ಅವರು ಸನ್ಮಾನಿತರ ವಿವರ ಒದಗಿಸಿದರು.
ಉತ್ತಮ ಶಾಖೆ ಎಂಬ ಗರಿಮೆಗೆ ಪಾತ್ರವಾಗಿರುವ ಪುತ್ತೂರು ಶಾಖೆಯ ಸಾಧನೆಯ ಬಗ್ಗೆ ನಿರ್ದೇಶಕರಾದ ಎ ಸೋಮಪ್ಪ ನಾಯ್ಕ ವಿವರ ಒದಗಿಸಿದರು ಮತ್ತು ಶಾಖೆಗೆ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ನಿರ್ದೇಶಕರಾದ ಶ್ರೀಮತಿ ಜಯಲಕ್ಷ್ಮಿ, ಚಂದ್ರಹಾಸ್, ಶ್ರೀಮತಿ ರೇಖಾ, ಶ್ವೇತಾ ಕಾಮತ್ ಪ್ರಾರ್ಥನೆಗೆದರು. ನಿರ್ದೇಶಕರಾದ ಸುಬ್ರಮಣ್ಯ ಭಟ್ ವಂದಿಸಿದರು.
ಕಾರ್ಯಕ್ರಮದಲ್ಲಿ ಅನಾರೋಗ್ಯ ಪೀಡಿತರಾಗಿರುವ ಮಹಾಬಲ ಶೆಟ್ಟಿಗಾರ್ ಅವರಿಗೆ ಸಹಾಯಧನ ವಿತರಿಸಲಾಯಿತು.ಉಪಾಧ್ಯಕ್ಷ ಜಿ.ಪ್ರಶಾಂತ್ ಪೈ, ನಿರ್ದೇಶಕರಾದ ರವಿಶಂಕರ್ ಪಿ.ಎನ್, ರವೀಂದ್ರನಾಥ್ ಪಿ.ಎಚ್.ಸುಬ್ರಮಣ್ಯ ಭಟ್, ಶ್ರೀ ಪದ್ಮರಾಜ್ ಬಲ್ಲಾಳ್, ಸೋಮಪ್ಪ ನ್ಯಾಕ್, ದಯಾಸಾಗರ್ ಪೂಂಜಾ, ಭಗವಾನ್
ದಾಸ್ ಅಡ್ಯಂತಾಯ, ಶ್ರೀಮತಿ ಮೀರಾ ಕರ್ಕೇರಾ . ಶ್ರೀಮತಿ ಜಯಲಕ್ಷ್ಮೀ, ಚಂದ್ರಹಾಸ್ , ವೃತ್ತಿಪರ ನಿರ್ದೇಶಕರಾದ ಕೃಷ್ಣ ಕಾಮತ್, ಶ್ರೀಮತಿ ಮಮತ ರಾವ್ ಮುಖ್ಯ ಕಾರ್ಯನಿರ್ವಣಾಧಿಕಾರಿ (ಪ್ರಭಾರ) ಶ್ರೀಮತಿ ಮಮತಾ ವೈ ಶೆಟ್ಟಿಗಾರ್ ಉಪಸ್ಥಿತರಿದ್ದರು.
ಸಭೆ ಆರಂಭಕ್ಕೆ ಮುನ್ನ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಿತು.
ಬಾಲಕೃಷ್ಣ ಪಚ್ಚನಾಡಿ ಕಾರ್ಯಕ್ರಮ ನಿರ್ವಹಿಸಿದರು.