ಸುಳ್ಯ ಕಸಬಾ ಗ್ರಾಮದ ದುಗ್ಗಲಡ್ಕ ಅಂಗನವಾಡಿ ಕೇಂದ್ರದಲ್ಲಿ ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಸಹಯೋಗದೊಂದಿಗೆ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಸೆ. 21ರಂದು ನಡೆಯಿತು.
ಇನ್ನರ್ ವೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಶ್ರೀಮತಿ ಚಿಂತನ ಸುಬ್ರಮಣ್ಯ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ದುಗ್ಗಲಡ್ಕ ನಮ್ಮ ಕ್ಲಿನಿಕ್ ನ ವೈದ್ಯಾಧಿಕಾರಿಗಳಾದ ಡಾಕ್ಟರ್ ಫರ್ಜಾನ ಆಗಮಿಸಿ ಪೌಷ್ಟಿಕಾಂಶದ ಬಗ್ಗೆ ಮಾಹಿತಿ ನೀಡಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳಾದ ಶ್ರೀಮತಿ ಶಶಿಕಲಾ ಇವರು ಉಪಸ್ಥಿತರಿದ್ದು ಗರ್ಭಿಣಿ, ಬಾಣಂತಿ ಮತ್ತು ಮಕ್ಕಳ ಆರೋಗ್ಯ ಸುರಕ್ಷತೆ ಹಾಗೂ ಪೌಷ್ಟಿಕತೆಯ ಬಗ್ಗೆ ಮಾಹಿತಿ ನೀಡಿದರು.
ಪೌಷ್ಟಿಕ ಆಹಾರ ತಯಾರಿಕೆ ಸ್ಪರ್ಧೆಯ ವಿಜೇತರಿಗೆ ಮತ್ತು ಕೇಂದ್ರದ ಪುಟಾಣಿಗಳಿಗೆ ಇನ್ನ ರ್ ವೀಲ್ ಕ್ಲಬ್ ಸುಳ್ಯ ಇದರ ಅಧ್ಯಕ್ಷೆ ಶ್ರೀಮತಿ ಚಿಂತನ ಸುಬ್ರಹ್ಮಣ್ಯ ತಮ್ಮ ಕ್ಲಬ್ ನ ವತಿಯಿಂದ ಬಹುಮಾನವನ್ನು ಆಯೋಜಿಸಿ ವಿತರಿಸಿ, ಸಿಹಿ ತಿಂಡಿ ನೀಡಿದರು.
ವೇದಿಕೆಯಲ್ಲಿ ಬಾಲವಿಕಾಸ ಸಮಿತಿಯ ಹಿರಿಯ ಸದಸ್ಯರಾದ ಶ್ರೀಮತಿ ಯಶೋಧ ಮೂಡೆಕಲ್ಲು, ದಯಾನಂದ ಸಾಲಿಯಾನ್ ಮೂಡೆಕಲ್ಲು, ಯತೀಶ್ ರೈ ದುಗ್ಗಲಡ್ಕ, ಇನ್ನರ್ ವೀಲ್ ಕ್ಲಬ್ ನ I S O ಶ್ರೀಮತಿ ಸೌಮ್ಯ ರವಿಪ್ರಸಾದ್ ಮಾಣಿಬೆಟ್ಟು ಮತ್ತು ನಮ್ಮ ಕ್ಲಿನಿಕ್ ನ ಲ್ಯಾಬ್ ಟೆಕ್ನಿಷಿಯನ್ ಶ್ರೀಮತಿ ಭವ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಪುಟಾಣಿ ಮಕ್ಕಳು, ಮಕ್ಕಳ ಪೋಷಕರು ಭಾಗವಹಿಸಿದರು. ಬಾಲವಿಕಾಸದ ಅಧ್ಯಕ್ಷರು ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿತ್ರ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಸಹಾಯಕಿ ಶ್ರೀಮತಿ ಶಾರದ ಸಹಕರಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಕೊನೆಗೊಳಿಸಲಾಯಿತು.