ಅಜ್ಜಾವರ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮ : ಸಮಿತಿ ರಚನೆ

0

ಅಧ್ಯಕ್ಷರಾಗಿ ಭಾಸ್ಕರ ರಾವ್ ಬಯಂಬು – ಪ್ರ.ಕಾರ್ಯದರ್ಶಿ ಲೋಕಯ್ಯ ಮಾಸ್ತರ್ ಅತ್ಯಾಡಿ

ಅಜ್ಜಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಸಂಭ್ರಮಲ್ಲಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಆಚರಿಸುವ ನಿಟ್ಟಿನಲ್ಲಿ ಶತಮಾನೋತ್ಸವ ಸಮಿತಿ ರಚಿಸಲಾಗಿದೆ.


ಸಮಿತಿಯ ಅಧ್ಯಕ್ಷರಾಗಿ ಅಜ್ಜಾವರ ಮಹಿಷಾಮರ್ದಿನೀ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಭಾಸ್ಕರ ರಾವ್ ಬಯಂಬು, ಪ್ರಧಾನ ಕಾರ್ಯದರ್ಶಿಯಾಗಿ ಲೋಕಯ್ಯ ಮಾಸ್ತರ್ ಅತ್ಯಾಡಿ, ಕೋಶಾಧಿಕಾರಿಯಾಗಿ ಶಾಲಾ ಮುಖ್ಯ ಶಿಕ್ಷಕಿ ತೇಜಾವತಿ ಟೀಚರ್ ಆಯ್ಕೆಯಾಗಿದ್ದಾರೆ.


ಗೌರವಾಧ್ಯಕ್ಷರಾಗಿ ಪದ್ಮನಾಭ ಪಡ್ಡಂಬೈಲು, ಉಪಾಧ್ಯಕ್ಷರುಗಳಾಗಿ ಹನೀಫ್ ಕೊಳಂಬೆ, ರೂಪಾನಂದ ಕರ್ಲಪ್ಫಾಡಿ, ಶಿವರಾಮ ನಾರ್ಕೋಡು, ಸವಿತಾ ಶಾಂತಿಮಜಲು, ಚನಿಯ ಕಲ್ತಡ್ಕ, ಕರುಣಾಕರ ಕರ್ಲಪ್ಪಾಡಿ, ಶಶಿಧರ ಶಿರಾಜೆ, ಜತೆ ಕಾರ್ಯದರ್ಶಿಗಳಾಗಿ ಪದ್ಮಾವತಿ ಎ ಸಹಶಿಕ್ಷಕಿ, ಬಶೀರ್ ಗುಳುಂಬು, ಜಯರಾಮ ಪಡ್ಡಂಬೈಲು, ಲೋಕೇಶ್ ಪಡ್ಡಂಬೈಲು, ವಿನಯ ಕರ್ಲಪ್ಪಾಡಿ, ಸೀತಾರಾಮ ಕರ್ಲಪ್ಪಾಡಿ, ಲಾವಣ್ಯ ಶಾಂತಿಮಜಲು, ಆರ್ಥಿಕ ಸಮಿತಿಯಲ್ಲಿ ಬೆಳ್ಯಪ್ಪ ಮುಡೂರು (ಅಧ್ಯಕ್ಷರು ಹಿರಿಯ ವಿದ್ಯಾರ್ಥಿ ಸಂಘ), ಪುಷ್ಪ ಎನ್.ಎಸ್. ಅಧ್ಯಕ್ಷರು ಎಸ್.ಡಿ.ಎಂ.ಸಿ., ಸ್ಮರಣ ಸಂಚಿಕೆ ಸಮಿತಿ ಸಂಚಾಲಕರಾಗಿ ಮನಮೋಹನ ಮುಡೂರು, ಪ್ರಚಾರ ಸಮಿತಿ ಸಂಚಾಲಕರಾಗಿ ಗುರುರಾಜ್ ಅಜ್ಜಾವರ, ಸಾಂಸ್ಕೃತಿಕ ಸಮಿತಿ ಸಂಚಾಲಕರಾಗಿ ರಾಜೇಶ್ ಶೆಟ್ಟಿ ಮೇನಾಲ, ಕ್ರೀಡಾ ಸಮಿತಿ ಸಂಚಾಲಕರಾಗಿ ಶರೀಫ್ ಸಿ.ಎ., ಅಲಂಕಾರ ಸಮಿತಿ ಸಂಚಾಲಕರಾಗಿ ನಾರಾಯಣ ಬಂಟ್ರಬೈಲು, ಆಹಾರ ಸಮಿತಿ ಸಂಚಾಲಕರಾಗಿ ಯತೀಶ್ ಪಡ್ಡಂಬೈಲು, ಸ್ವಯಂ ಸೇವಕ ಸಮಿತಿ ಸಂಚಾಲಕರಾಗಿ ಗಿರಿಧರ ನಾರಾಲು, ಮಹಿಳಾ ಸಮಿತಿ ಸಂಚಾಲಕರಾಗಿ ಶಶ್ಮಿ ಭಟ್ ಅಜ್ಜಾವರ ಆಯ್ಕೆಯಾದರು.