ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆ

0

ಮುರುಳ್ಯ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಎಂ.ಬಿ ಸೀತಾರಾಮ ನಾಗನಕಜೇಯವರ ಅದ್ಯಕ್ಷತೆಯಲ್ಲಿ ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಸೆ. 25ರಂದು ನಡೆಯಿತು.

ಸಂಘವು 9 ಕೋಟಿ 26 ಲಕ್ಷ 9 ಸಾವಿರದ 461 ರೂಪಾಯಿ 64 ಪೈಸೆ ವ್ಯವಹಾರ ಮಾಡಿ 8 ಲಕ್ಷ 98 ಸಾವಿರದ 357 ರೂಪಾಯಿ 81 ಪೈಸೆ ಲಾಭಗಳಿಸಿದೆ ಎಂದು ಅಧ್ಯಕ್ಷರು ಹೇಳಿದರು.

ಉಪಾಧ್ಯಕ್ಷೆ ಶ್ರೀಮತಿ ಲೀಲಾವತಿ ಮಿಲ್ಕ್ ಮಾಸ್ಟರ್ ಸ್ವಾಗತಿಸಿ, ಕಾರ್ಯದರ್ಶಿ ಅಕ್ಷತಾ ಶರತ್ ಕುಮಾರ್ ವರದಿ ವಾಚಿಸಿದರು. ನಿರ್ದೇಶಕರುಗಳಾದ ಅಶೋಕ್ ಕುಮಾರ್ ರೈ, ಹರೀಶ್ ರೈ, ಸುಂದರ ಗೌಡ ಅರೇಂಬಿ, ಜಗನಾಥ ರೈ ಕೊಡ್ಡೋಲ್, ಪ್ರಭಾಕರ ರೈ, ಶ್ರೀಮತಿ ಗೀತಾ, ಶ್ರೀಮತಿ ಭವ್ಯ ಶ್ರೀಮತಿ ಸಾವಿತ್ರಿ ಶ್ರೀಮತಿ ಸುಂದರಿ ರಾಮಚಂದ್ರ ಪೂಜಾರಿ, ವಿಸ್ತರಣಾಧಿಕಾರಿ ಹರೀಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹೈನುಗಾರ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಿಬ್ಬಂದಿಗಳಾದ ಸುಂದರ ಆಲಾಜೇ, ಜಸ್ಮನ್, ಲಕ್ಷ್ಮೀಶ ಕೆ, ಶ್ರೀಮತಿ ಶೀಲಾವತಿ,, ವಿಶ್ವನಾಥ ಎ ಸಹಕರಿಸಿದರು.

ಸುಂದರ ಗೌಡ ಆರೆಂಬಿ ಪ್ರಾರ್ಥಿಸಿ, ಪ್ರದೀಪ್ ರೈ ಗುತ್ತು ಎಣ್ಮುರು ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕಿ ಶ್ರೀಮತಿ ಗೀತಾ ವಂದಿಸಿದರು.

ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ