ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜಿನಾಮೆಗೆ ಆಗ್ರಹ : ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ

0

ಮೂಡ ಹಗರಣಕ್ಕೆ ಸಂಬಂಧಿಸಿ ಪ್ರಾಸಿಕ್ಯೂಶನ್ ಗೆ ನ್ಯಾಯಾಲಯ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿ ಇಂದು ಬಿ ಜೆ ಪಿ ಸುಳ್ಯ ನಗರ ಮಹಾಶಕ್ತಿ ಕೇಂದ್ರದ ವತಿಯಿಂದ ನಗರದ ಖಾಸಗಿ ಬಸ್ಸು ನಿಲ್ದಾಣ ಬಳಿ ಪ್ರತಿಭಟನೆ ನಡೆಸಿದರು.

ಮೂಡ ಹಗರಣದ ಆರೋಪದ ಬಗ್ಗೆ ನ್ಯಾಯಾಲಯವು ಮುಖ್ಯಮಂತ್ರಿ ಸಿದ್ದರಾಮಯ್ಯರವರ ಅರ್ಜಿಯನ್ನು ವಜಾ ಗೊಳಿಸಿದ್ದು,ಈ ಪ್ರಕರಣದಲ್ಲಿ ನಿಷ್ಪಕ್ಷಪಾತವಾಗಿ ತನಿಖೆಯಾಗ ಬೇಕಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಲೇ ಬೇಕಾಗಿದೆ ಎಂದು ಪ್ರತಿಭಟನಾಕಾರರು ಅಗ್ರಹಿಸಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಮಂಡಲ ಸಮಿತಿ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜೀನಾಮೆ ನೀಡಲೇ ಬೇಕು. ಇಷ್ಟು ದೊಡ್ಡ ಪ್ರಕರಣದಲ್ಲಿ ಭಾಗಿಯಾಗಿರುವ ಮುಖ್ಯಮಂತ್ರಿ ಅವರ ಸ್ಥಾನಕ್ಕೆ ಗೌರವಕೊಟ್ಟು ರಾಜೀನಾಮೆ ನೀಡಿ ತನಿಖೆಗೆ ಸ್ಪಂದಿಸ ಬೇಕಾಗಿದೆ.ಅಲ್ಲದೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಈಗಾಗಲೇ ಹಗ್ಗಜಗ್ಗಾಟ ಪ್ರಾರಂಭವಾಗಿದ್ದು ಕುರ್ಚಿ ಕಿತ್ತಾಟ ಶುರುವಾಗಿದೆ. ಸಿದ್ದರಾಮಯ್ಯನವರು ನಾನು ದಲಿತಪರ ಎಂದು ಸದಾ ಹೇಳುತಿದ್ದರು.ಆದರೆ ಅವರು ಈಗ ದಲಿತರನ್ನೇ ವಂಚಿಸಿದ್ದಾರೆ. ಕಾಂಗ್ರೆಸ್ ಸರಕಾರದಿಂದ ರಾಜ್ಯದ ಪ್ರಗತಿ ಸಾಧ್ಯವಿಲ್ಲ. ಜನರಿಗೆ ಕೊಡುವುದರಲ್ಲಿ ಹತ್ತುಪಟ್ಟು ಅವರು ಪಡೆಯುತ್ತಿದ್ದಾರೆ ಅಷ್ಟೆ ಎಂದು ಆರೋಪಿಸಿದರು.

ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಎ.ಟಿ.ಕುಸುಮಾಧರ ಮಾತನಾಡಿ ‘ಸಿದ್ದರಾಮಯ್ಯನವರು ಬೇರೆಯವರು ತಪ್ಪುಮಾಡಿ ಬೇರೆ ಕೇಸಲ್ಲಿ ಬಿದ್ದಾಗ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದರು.ಈಗ ಅವರು ತಪ್ಪಿನಲ್ಲಿ ಇದ್ದಾರೆ. ಈಗ ಅವರಿಗೆ ರಾಜೀನಾಮೆ ನೀಡಲು ಯಾಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರು .14 ಸೈಟ್ ಗಳನ್ನು ಪಡೆದುಕೊಂಡು ನಾನು ಏನು ಮಾಡಿಲ್ಲ ನಾನೇ ಪ್ರಾಮಾಣಿಕ ಎಂದು ಬಿಂಬಿಸುತ್ತಿದ್ದಾರೆ ಅಂತಹ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಅಧಿಕಾರದಲ್ಲಿರುವ ನೈತಿಕತೆ ಇಲ್ಲ ಎಂದು ಹೇಳಿದರು. ಸುಪ್ರೀಂ ಕೋರ್ಟ್ ಗೆ ಹೋದರೂ ಹೊರಗೆ ಬರಲು ಸಾಧ್ಯವಿಲ್ಲ ನಿಮಗೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುವವರೆಗೆ ಗ್ರಾಮ ಗ್ರಾಮದಲ್ಲಿ ಹೋರಾಟ ನಡೆಸುತ್ತೇವೆ ಅಲ್ಲದೇ ನಮ್ಮ ಹೋರಾಟ ನಿಲ್ಲುವುದಿಲ್ಲ ಆದ್ದರಿಂದ ತಕ್ಷಣಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಸಭೆಯಲ್ಲಿ ಮುಖಂಡರುಗಳಾದ ಹರೀಶ್ ಬೂಡುಪನ್ನೆ , ನ.ಪಂ ಅಧ್ಯಕ್ಷೆ ಶಶಿಕಲಾ , ಅಶೋಕ್ ಅಡ್ಕಾರ್ , ಚನಿಯ ಕಲ್ತಡ್ಕ ,ಬೂಡು ರಾಧಾಕೃಷ್ಣ ರೈ , ಸೋಮ ಶೇಖರ್ ಪೈಕಾ ,ಜಗದೀಶ್ , ಬಾಲಗೋಪಾಲ್ , ರಮೇಶ್ ಇರಂತಮಜಲು , ನಾರಾಯಣ ಶಾಂತಿನಗರ , ಶೀಲಾ ಕುರುಂಜಿ , ಪಿ ಕೆ ಉಮೇಶ್ ,ನ.ಪಂ ಉಪಾಧ್ಯಕ್ಷ ಬುದ್ದನಾಯ್ಕ್ , ಮಹೇಶ್ ರೈ ಮೇನಾಲ , ಶಂಕರ್ ಪೆರಾಜೆ, ಜಿನ್ನಪ್ಪ ಪೂಜಾರಿ , ದಾಮೋದರ ಮಂಚಿ , ಸಿ ಎ ಬ್ಯಾಂಕ್ ಉಪಾಧ್ಯಕ್ಷ ಚಂದ್ರಶೇಖರ , ಸುನಿಲ್ ಕೇರ್ಪಳ ಮೊದಲಾದವರು ಉಪಸ್ಥಿತರಿದ್ದರು.

ನಾರಾಯಣ ಶಾಂತಿನಗರ ಕಾರ್ಯಕ್ರಮ ನಿರೂಪಿಸಿ ಹೇಮಂತ್ ಕುಮಾರ್ ಕಂದಡ್ಕ ವಂದಿಸಿದರು.


ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರುಗಳು ಭಾಗವಹಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.