ಶ್ರೀಮತಿ ಕುಂಞಮ್ಮ ಬಾರ್ಪಣೆ ನಿಧನ

0

ಆಲೆಟ್ಟಿ ಗ್ರಾಮದ ಬಾರ್ಪಣೆ ನಿವಾಸಿ ದಿ.ಅಪ್ಪಕುಂಞ ಯವರ ಪತ್ನಿ ಶ್ರೀಮತಿ ಕುಂಞಮ್ಮ ಬಾರ್ಪಣೆ ಯವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ತನ್ನ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.

ಮೃತರು ಓರ್ವ ಪುತ್ರ ತೀಯ ಸಮಾಜದ ಗ್ರಾಮ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಪುತ್ರಿಯರಾದ ಶ್ರೀಮತಿ ಪುಷ್ಪಾವತಿ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಪದ್ಮಾವತಿ, ಸೊಸೆ ಶ್ರೀಮತಿ ರತ್ನಾವತಿ ಹಾಗೂ ಅಳಿಯಂದಿರನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.