ಭಾರತೀಯ ಸೇನೆಯಲ್ಲಿ ಸುಧೀರ್ಘ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ ಆಲೆಟ್ಟಿ ಗ್ರಾಮದ ಶರತ್ ಕುಮಾರ್ ನಾರ್ಕೋಡುರವರು ಸೆ. 30ರಂದು ನಿವೃತ್ತಿಯಾಗುತ್ತಿದ್ದಾರೆ.
2007ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಇವರು, ಮದ್ರಾಸ್ ಇಂಜಿನಿಯರಿಂಗ್ ಗ್ರೂಪಿನಲ್ಲಿ ಬೆಂಗಳೂರಿನಲ್ಲಿ ತರಬೇತಿ ಪಡೆದ ಬಳಿಕ ಜಮ್ಮು ಕಾಶ್ಮೀರ, ಕಲ್ಕತ್ತಾ, ಸಿಕ್ಕಿಂ, ಶ್ರೀ ನಗರ, ಅರುಣಾಚಲ ಪ್ರದೇಶ, ದೆಹಲಿ, ಉತ್ತರಪ್ರದೇಶ, ಪಂಜಾಬ್ ನಲ್ಲಿ ಸೇವೆ ಸಲ್ಲಿಸಿದ ಬಳಿಕ ಇದೀಗ ಕಳೆದ ಮೂರು ತಿಂಗಳಿನಿಂದ ಅಸ್ಸಾಂನಲ್ಲಿ ಸೇವೆಯಲ್ಲಿದ್ದರು.
ಆಲೆಟ್ಟಿ ಗ್ರಾಮದ ನಾರ್ಕೋಡು ದಿ.ಯೋಗಿಶ್ ಮತ್ತು ಚಂದ್ರಾವತಿ ದಂಪತಿಗಳ ಪ್ರಥಮ ಪುತ್ರನಾಗಿರುವ ಇವರು, ಪತ್ನಿ ಶ್ರೀಮತಿ ಅಶ್ವಿತಾ ಗ್ರಹಿಣಿಯಾಗಿದ್ದಾರೆ. ಪುತ್ರಿ ಛಾರ್ವಿ ನಾರ್ಕೋಡು ಶಾಲೆಯಲ್ಲಿ ಎಲ್.ಕೆ.ಜಿ ವಿದ್ಯಾರ್ಥಿನಿ.