ಕುಂಬರ್ಚೋಡು ಮುಹಿಯದ್ದೀನ್ ಜುಮ್ಮಾ ಮಸ್ಜಿದ್‌ನಲ್ಲಿ ಮಿಲಾದ್ ಫೆಸ್ಟ್

0

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ

ಕುಂಬರ್ಚೋಡು ಮುಹಿಯದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಮಿಲಾದ್ ಫೆಸ್ಟ್ ‘ಸಮ್ಮಯಿತುಹು ಮುಹಮ್ಮದ’ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೌಲಿದ್ ಪಾರಾಯಣ, ದುವಾ ಮಜ್ಲಿಸ್ ಸೆ ೨೮ ರಂದು ಮಸೀದಿ ವಠಾರದಲ್ಲಿ ನಡೆಯಿತು.

ಸಂಜೆ 5 ಗಂಟೆಗೆ ಮಸೀದಿ ಸಮಿತಿ ಅಧ್ಯಕ್ಷ ಹನೀಫ್ ಹಾಜಿ ಯವರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಿತು. ಸ್ಥಳೀಯ ಮಸೀದಿ ಖತೀಬರಾದ ಅಶ್ರಫ್ ಮುಸ್ಲಿಯಾರ್ ದುವಾ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಡನ್ನೂರು ಅರಬಿಕ್ ಕಾಲೇಜು ಉಪನ್ಯಾಸಕ ಸಿದ್ದೀಕ್ ಹುದವಿ ಯವರು ಮಿಲಾದ್ ಸಂದೇಶ ಭಾಷಣ ಮಾಡಿದರು. ಜಾಲ್ಸೂರು ಗ್ರಾಮ ಪಂಚಾಯತ್ ಸದಸ್ಯ ಮುಜೀಬ್ ಪೈಚಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.

ವೇದಿಕೆಯಲ್ಲಿ ಸಯ್ಯಿದ್ ಇಸ್ಮಾಯಿಲ್ ತಂಗಳ್, ಮಸೀದಿ ಸಮಿತಿ ಉಪಾಧ್ಯಕ್ಷ ಅಬ್ದುಲ್ ಕರೀಂ ಪಿ ಎಂ, ಕಾರ್ಯದರ್ಶಿ ಅಬ್ದುಲ್ ಖಾದರ್ ಅಕ್ಕರೆ,ಹಿರಿಯರಾದ ಹಾಜಿ ಅಬ್ದುಲ್ ಖಾದರ್,ಸುದ್ದಿ ಪತ್ರಿಕೆ ವರದಿಗಾರ ಹಸೈನಾರ್ ಜಯನಗರ, ಅಬ್ಬಾಸ್ ಅಕ್ಕರೆ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿ ಸ್ಪರ್ಧಾ ಕಾರ್ಯಕ್ರಮ ನಡೆದು ಬಹುಮಾನ ವಿತರಣೆ, ಹಾಗೂ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಣೆ ನಡೆಯಿತು.

ಬಳಿಕ ಮಸೀದಿ ಗುರುಗಳ ನೇತೃತ್ವದಲ್ಲಿ ಮೌಲಿದ್ ಮಜ್ಲಿಸ್ ಹಾಗೂ ನಬಿ ಕೀರ್ತನಾ ಕಾರ್ಯಕ್ರಮ ನಡೆದು ಸಾಮೂಹಿಕ ಪ್ರಾರ್ಥನೆ ಬಳಿಕ ಅನ್ನದಾನ ನಡೆಯಿತು.

ಕಾರ್ಯಕ್ರಮದಲ್ಲಿ ಸ್ಥಳೀಯರಾದ ಮಿಸ್ಬಾಹ್ ಪೈಚಾರ್, ಸಿರಾಜ್ ಕೆ ಪಿ, ಕರೀಂ ಪಿ ಎಂ, ಅಶ್ರಫ್ ಪ್ರಗತಿ, ಮಾಹಿನ್ ಕಾರ್ಲೆ, ಅಬ್ದುಲ್ ಗಫುರ್, ಅಲ್ ಇರ್ಷಾದಿಯಾ ಯೂತ್ ಕಮಿಟಿ ಅಧ್ಯಕ್ಷ ಆಸೀಫ್,ರುಫೈದ್, ಮಹಮ್ಮದ್ ಅಲಿ ಪೆರಾಜೆ, ರಫೀಕ್ ಡಿ ಎಂ ಮೊದಲಾದವರು ಸಹಕರಿಸಿದರು.

ಅಧ್ಯಕ್ಷ ಹಾಜಿ ಹನೀಫ್ ಸ್ವಾಗತಿಸಿ ಪ್ರಾಸ್ತವಿಕ ಮಾತನಾಡಿದರು. ಮುಜೀಬ್ ಪೈಚಾರ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಅಬ್ದುಲ್ ಖಾದರ್ ಅಕ್ಕರೆ ವಂದಿಸಿದರು. ವಿದ್ಯಾರ್ಥಿಗಳು, ಪೋಷಕರು, ಸ್ಥಳೀಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.