ಸುಳ್ಯ ಅಂಬಟೆಡ್ಕ ಬಳಿ ಕಂಪ್ಯೂಟರೈಸ್ಡ್ ಸ್ಟಿಕರ್ ಕಟ್ಟಿಂಗ್ ಸಂಸ್ಥೆಯವರು ತಮ್ಮಲ್ಲಿಯ ಕಸದ ರಾಶಿಯನ್ನು ಅಂಬಟೆಡ್ಕ ಪ್ರೆಸ್ ಕ್ಲಬ್ ಬಳಿ ಬಿಸಾಕಿರುವುದಕ್ಕೆ ಸುಳ್ಯ ಪಟ್ಟಣ ಪಂಚಾಯತ್ ವತಿಯಿಂದ ಪರಿಶೀಲಿಸಿ 5೦೦೦ ರೂ ದಂಡನೆ ವಿಧಿಸಿದ ಘಟನೆ ಇಂದು ನಡೆದಿದೆ.
ಸುಳ್ಯದ ಪ್ರೆಸ್ ಕ್ಲಬ್ ಬಳಿ ಪದೇ ಪದೇ ಕಸ ಬಿಸಾಡುವುದನ್ನು ಗಮನಿಸಿದ ಪತ್ರಕರ್ತರು ಮತ್ತು ಅಮರ ಸುಳ್ಯ ರಮಣೀಯ ಸುಳ್ಯ ತಂಡದ ಸದಸ್ಯರೊಬ್ಬರು ಪತ್ತೆ ಕಾರ್ಯ ನಡೆಸಿದರು.
ಅದರಲ್ಲಿ ದೊರೆತ ಮೊಬೈಲ್ ನಂಬರ್ ನ ಆಧಾರದಲ್ಲಿ ಸುಳ್ಯ ನಗರ ಪಂಚಾಯತ್ ಮತ್ತು ನ.ಪಂ.ಅಧ್ಯಕ್ಷರಿಗೆ ದೂರು ನೀಡಿದರು. ಅದನ್ನು ನಗರ ಪಂಚಾಯತ್ ಪರಿಶೀಲಿಸಿದಾಗ ಅಂಬಟಡ್ಕದ ಕಂಪ್ಯೂಟರೈಸ್ಡ್ ಕಟ್ಟಿಂಗ್ ಶಾಫ್ ನವರು ತಿಳಿಯಿತು. ಅವರನ್ನು ಕಚೇರಿ ಬರುವಂತೆ ಮಾಡಿದಾಗ ಅವರು ಒಪ್ಪಿಕೊಂಡರೆಂದೂ ಆಗ ಎಚ್ಚರಿಕೆ ನೀಡಿ ರೂ. ೫ ಸಾವಿರ ದಂಡ ವಿಧಿಸಲಾಯಿತೆಂದು ತಿಳಿದುಬಂದಿದೆ.
ನ.ಪಂ.ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ ಮತ್ತು ಅಧಿಕಾರಿಗಳು ಕಾರ್ಮಿಕರಿಂದ ಅಲ್ಲಿದ್ದ ಕಸ ತೆರವು ಮಾಡಿಸಿದರು.